alex Certify ತೂಕ ಹೆಚ್ಚಿಸಿಕೊಳ್ಳಲು ಬಯಸುವವರು ಈ ರೀತಿ ಸೇವಿಸಿ ಖರ್ಜೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಹೆಚ್ಚಿಸಿಕೊಳ್ಳಲು ಬಯಸುವವರು ಈ ರೀತಿ ಸೇವಿಸಿ ಖರ್ಜೂರ

ಖರ್ಜೂರ ತಿನ್ನಲು ಬಹಳ ರುಚಿಕರವಾಗಿರುತ್ತದೆ, ಜೊತೆಗೆ ಹೆಚ್ಚಿನ ಪೋಷಕಾಂಶಗಳಿಂದ ತುಂಬಿರುತ್ತದೆ. ಖರ್ಜೂರವನ್ನು ಸೇವಿಸಿದ್ರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು.  ಪ್ರೋಟೀನ್, ಕಾರ್ಬೋಹೈಡ್ರೇಟ್, ಆರೋಗ್ಯಕರ ಕೊಬ್ಬು, ಫೋಲೇಟ್, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಖರ್ಜೂರದಲ್ಲಿ ಉತ್ತಮ ಪ್ರಮಾಣದಲ್ಲಿವೆ.

ತಾಮ್ರ, ಸತು, ಕಬ್ಬಿಣ ಮತ್ತು ರಂಜಕದ ಕೊರತೆ ಇರುವವರು ಖರ್ಜೂರ ತಿನ್ನಬೇಕು. ತೂಕ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿರುವವರು ಖರ್ಜೂರವನ್ನು ತಿನ್ನುವುದು ತುಂಬಾ ಪರಿಣಾಮಕಾರಿ. ಸರಿಯಾದ ಪ್ರಮಾಣ ಮತ್ತು ಸೂಕ್ತ ಸಮಯದಲ್ಲಿ ಇದನ್ನು ಸೇವನೆ ಮಾಡಬೇಕು. ತೂಕ ಹೆಚ್ಚಿಸಲು ಖರ್ಜೂರ ತುಂಬಾ ಒಳ್ಳೆಯ ಆಹಾರ. ವ್ಯಾಯಾಮ ಮಾಡುವ 30-60 ನಿಮಿಷಗಳ ಮೊದಲು ಖರ್ಜೂರವನ್ನು ಸೇವಿಸಿ. ಬೇಕಿದ್ದರೆ ರಾತ್ರಿ ಕೂಡ ತಿಂದು ಮಲಗಬಹುದು.

ತೂಕವನ್ನು ಹೆಚ್ಚಿಸಲು ಬಯಸುವವರು ಬೆಳಗ್ಗೆ ಖರ್ಜೂರವನ್ನು ತಿನ್ನಬಾರದು. ಏಕೆಂದರೆ ಇದರಲ್ಲಿ ಫೈಬರ್‌ ಸಮೃದ್ಧವಾಗಿದೆ. ಇದು ದೀರ್ಘಕಾಲದವರೆಗೆ ಹಸಿವನ್ನು ಅನುಭವಿಸಲು ಬಿಡುವುದಿಲ್ಲ. ಆರೋಗ್ಯದ ದೃಷ್ಟಿಯಿಂದ ಇದನ್ನು ಸೇವಿಸುತ್ತಿದ್ದರೆ ಬೆಳಗ್ಗೆ ತಿನ್ನುವುದು ಸೂಕ್ತ. ದೌರ್ಬಲ್ಯ ಇರುವವರು ಬೆಳಗಿನ ಉಪಾಹಾರದಲ್ಲಿ ಖರ್ಜೂರವನ್ನು ಸೇವಿಸಬಹುದು. ತೂಕ ಹೆಚ್ಚಾಗಬೇಕೆಂದು ಬಯಸುವವರು ದಿನಕ್ಕೆ 7 ರಿಂದ 8 ಖರ್ಜೂರವ್ನನು ತಿನ್ನಬೇಕು. ಒಂದು ಖರ್ಜೂರದಲ್ಲಿ ಸುಮಾರು 20 ಕ್ಯಾಲೊರಿಗಳಿರುತ್ತವೆ. ಆದ್ದರಿಂದ ನೀವು ಸುಮಾರು 240 ಕ್ಯಾಲೊರಿಗಳನ್ನು ಪಡೆಯುತ್ತೀರಿ.

ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಖರ್ಜೂರದ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ತಿನ್ನುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ತೂಕವನ್ನು ಹೆಚ್ಚಿಸಲು ರಾತ್ರಿ ಖರ್ಜೂರವನ್ನು ತಿನ್ನಿ. ಬೇಕಿದ್ದರೆ ಹಾಲಿನೊಂದಿಗೆ ಕೂಡ ತಿನ್ನಬಹುದು. ಹಾಲು ಮತ್ತು ಖರ್ಜೂರವನ್ನು ಒಟ್ಟಿಗೆ ತಿನ್ನುವುದು ತೂಕವನ್ನು ತ್ವರಿತವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಖರ್ಜೂರವನ್ನು ಹಾಲಿನಲ್ಲಿ ಹಾಕಿ ಕುದಿಸಿ ನಂತರ ಸೇವಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...