alex Certify ತೂಕ ಕಡಿಮೆಯಾಗಲು ಇಲ್ಲಿದೆ ಸುಲಭ ಉಪಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಕಡಿಮೆಯಾಗಲು ಇಲ್ಲಿದೆ ಸುಲಭ ಉಪಾಯ

ಬೊಜ್ಜು ಸದ್ಯ ಎಲ್ಲರ ಸಮಸ್ಯೆ. ತೂಕ ಇಳಿಸಿಕೊಳ್ಳಬೇಕು, ಹೊಟ್ಟೆ ಕರಗಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಕೆಲವೊಮ್ಮೆ ಈ ಕಸರತ್ತು ಫಲ ನೀಡಿದ್ರೆ ಹೆಚ್ಚು ಬಾರಿ ವಿಫಲವಾಗೋದೇ ಹೆಚ್ಚು.

ನಾವು ಹೇಳುವ ಸುಲಭ ಉಪಾಯ ಮೂರೇ ದಿನದಲ್ಲಿ ತೂಕ ಇಳಿಸಿಕೊಳ್ಳಲು ನೆರವಾಗುತ್ತೆ. ಒಮ್ಮೆ ಪ್ರಯತ್ನಿಸಿ ನೋಡಿ ಎನ್ನುತ್ತಾರೆ ತಜ್ಞರು.

ಬೇಕಾಗುವ ಸಾಮಗ್ರಿ :

ಒಂದು ಇಂಚು ತುರಿದ ಶುಂಠಿ

ಕತ್ತರಿಸಿದ ನಿಂಬೆ ಹೋಳು

ಒಂದು ಕಪ್ ನೀರು

ಒಂದು ಚಮಚ ಜೇನುತುಪ್ಪ

ಮಾಡುವ ವಿಧಾನ :

ಒಂದು ಪಾತ್ರೆಗೆ ನೀರನ್ನು ಹಾಕಿ ಚೆನ್ನಾಗಿ ಕುದಿಸಿ. ನಂತ್ರ ಗ್ಯಾಸ್ ಬಂದ್ ಮಾಡಿ. ಈ ನೀರಿಗೆ ನಿಂಬೆ ಹಾಗೂ ಶುಂಠಿಯನ್ನು ಹಾಕಿ ಮಿಕ್ಸ್ ಮಾಡಿ. ಅದನ್ನು ಅರ್ಧ ತಾಸು ಮುಚ್ಚಿಡಿ. ನಂತ್ರ ಒಂದು ಗ್ಲಾಸ್ ಗೆ ಈ ಮಿಶ್ರಣವನ್ನು ಹಾಕಿ ಒಂದು ಚಮಚ ಜೇನು ತುಪ್ಪವನ್ನು ಹಾಕಿ ಮಿಕ್ಸ್ ಮಾಡಿ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವನೆ ಮಾಡಿ. ಕೇವಲ ಮೂರು ದಿನದಲ್ಲಿ ವ್ಯತ್ಯಾಸ ನೋಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...