alex Certify ತೂಕ ಇಳಿಸಲು ಬೆಸ್ಟ್‌ ತರಕಾರಿ ಇದು, ಸೇವನೆಯ ವಿಧಾನ ನಿಮಗೆ ತಿಳಿದಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಸಲು ಬೆಸ್ಟ್‌ ತರಕಾರಿ ಇದು, ಸೇವನೆಯ ವಿಧಾನ ನಿಮಗೆ ತಿಳಿದಿರಲಿ

ಬೆಂಡೆಕಾಯಿ ಬಹುತೇಕ ಜನರು ಇಷ್ಟಪಡುವಂತಹ ತರಕಾರಿಗಳಲ್ಲೊಂದು. ಬೆಂಡೆಕಾಯಿಯಲ್ಲಿ ವಿಟಮಿನ್-ಸಿ ಹೇರಳವಾಗಿದೆ. ನೀವು ಪ್ರತಿದಿನ 100 ಗ್ರಾಂ ಬೆಂಡೆಕಾಯಿಯನ್ನು ಸೇವಿಸಿದರೆ ನಿಮ್ಮ ದೇಹಕ್ಕೆ ಅಗತ್ಯವಿರುವ ಶೇ.38ರಷ್ಟು ವಿಟಮಿನ್ ಸಿ ದೊರೆಯುತ್ತದೆ.

ವಿಟಮಿನ್-ಸಿ ಅನೇಕ ರೋಗಗಳು ಮತ್ತು ಸೋಂಕುಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ. ಬೆಂಡೆಕಾಯಿ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುವುದು ಮಾತ್ರವಲ್ಲ, ಅದರ ಸೇವನೆಯಿಂದ ತೂಕವನ್ನು ಸಹ ನಿಯಂತ್ರಿಸಬಹುದು.

ನಿಯಮಿತವಾಗಿ ಬೆಂಡೆಕಾಯಿ ಸೇವನೆ ಮಾಡಿದ್ರೆ ಅನೇಕ ರೋಗಗಳಿಂದಲೂ ಪಾರಾಗಬಹುದು. ಬೆಂಡೆಕಾಯಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಸಕ್ಕರೆ ಕಾಯಿಲೆ ಇರುವವರಿಗೆ ಬೆಂಡೆಕಾಯಿ ವರದಾನವಿದ್ದಂತೆ. ಬೆಂಡೆಕಾಯಿ ಸೇವನೆಯಿಂದ ತೂಕ ಕೂಡ ಇಳಿಸಬಹುದು.

ಬೆಂಡೆಕಾಯಿಯಲ್ಲಿ ಹೇರಳವಾಗಿ ಫೈಬರ್‌ ಅಂಶವಿರುವುದರಿಂದ ತೂಕವನ್ನು ನಿಯಂತ್ರಿಸಬಹುದು. ಬೆಂಡೆಕಾಯಿಯಲ್ಲಿ ಹೆಚ್ಚು ಕ್ಯಾಲೋರಿ ಇಲ್ಲದೇ ಇರುವುದರಿಂದ ತೂಕ ಹೆಚ್ಚಾಗಬಹುದು ಎಂಬ ಭಯವಿಲ್ಲದೇ ಇದನ್ನು ಸೇವನೆ ಮಾಡಬಹುದು. ಬೆಂಡೆಕಾಯಿ ಕ್ಯಾನ್ಸರ್ ವಿರುದ್ಧ ಹೋರಾಡಬಲ್ಲ ಆಹಾರಗಳಲ್ಲೊಂದು. ಇದನ್ನು ಸೇವನೆ ಮಾಡುವುದರಿಂದ ನಿಮ್ಮ ಕರುಳಿನಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕಬಹುದು. ಬೆಂಡೆಕಾಯಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಬಹುದು. ಹಾಗಾಗಿ ಮಧುಮೇಹ ರೋಗಿಗಳನ್ನು ಇದನ್ನು ಸೇವನೆ ಮಾಡುವುದು ಸೂಕ್ತ. ಆದರೆ ಗಂಭೀರ ಸಮಸ್ಯೆಗಳಿದ್ದಲ್ಲಿ ಒಮ್ಮೆ ವೈದ್ಯರ ಸಲಹೆ ಪಡೆದು ಸೇವನೆ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...