alex Certify ತೀರ್ಥಹಳ್ಳಿ ಎಳ್ಳಮಾಮವಾಸ್ಯೆ ಜಾತ್ರೆಗೆ ಸಕಲ ಸಿದ್ಧತೆ; ಡಿ.25ರಂದು ತೆಪ್ಪೋತ್ಸವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೀರ್ಥಹಳ್ಳಿ ಎಳ್ಳಮಾಮವಾಸ್ಯೆ ಜಾತ್ರೆಗೆ ಸಕಲ ಸಿದ್ಧತೆ; ಡಿ.25ರಂದು ತೆಪ್ಪೋತ್ಸವ

ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ಡಿಸೆಂಬರ್ 21ರಿಂದ ಆರಂಭವಾಗಿದ್ದು, 27 ರವರೆಗೆ ನಡೆಯಲಿದೆ. ಡಿಸೆಂಬರ್ 23ರ ಇಂದು ಪರಶುರಾಮ ತೀರ್ಥ ಪೂಜೆ, ತೀರ್ಥಾಭಿಷೇಕ ಮತ್ತು ತೀರ್ಥ ಸ್ನಾನ ನಡೆಯಲಿದೆ.

ಡಿಸೆಂಬರ್ 24ರ ಶನಿವಾರ ಶ್ರೀಮನ್ಮಹಾ ರಥೋರೋಹಣ ನಡೆಯಲಿದ್ದು, ಡಿಸೆಂಬರ್ 25ರ ಭಾನುವಾರದಂದು ತೆಪ್ಪೋತ್ಸವ, ಜನಪದ ಉತ್ಸವ ಹಾಗೂ ಸಿಡಿಮದ್ದು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಾರಿ 5 ಲಕ್ಷ ರೂಪಾಯಿ ಮೊತ್ತದ ಸಿಡಿಮದ್ದು ಪ್ರದರ್ಶನ ನಡೆಯಲಿದೆ ಎಂದು ತೆಪ್ಪೋತ್ಸವ ಆಚರಣಾ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ತಿಳಿಸಿದ್ದಾರೆ.

ಈ ಬಾರಿಯೂ ಎಳ್ಳಮಾವಾಸ್ಯೆ ಜಾತ್ರೆಗೆ ಒಂದು ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆಯಿದ್ದು, ಮೂರು ದಿನಗಳ ಕಾಲ ತುಂಗಾ ತೀರದಲ್ಲಿ ಪ್ರತಿನಿತ್ಯ 15,000 ಮಂದಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಈ ಬಾರಿ ವಿಶೇಷ ಆಕರ್ಷಣೆಯಾಗಿ ಕಾರ್ಕಳದ ಬೋಟ್ ಗಳನ್ನು ಆಹ್ವಾನಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...