alex Certify ತಿಹಾರ್ ಜೈಲಲ್ಲಿ ವಿಲಕ್ಷಣ ಪ್ರಸಂಗ: ಭಯದಿಂದ ಮೊಬೈಲ್ ಫೋನ್ ನುಂಗಿದ ಕೈದಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿಹಾರ್ ಜೈಲಲ್ಲಿ ವಿಲಕ್ಷಣ ಪ್ರಸಂಗ: ಭಯದಿಂದ ಮೊಬೈಲ್ ಫೋನ್ ನುಂಗಿದ ಕೈದಿ…!

ಜೈಲಾಧಿಕಾರಿಗಳ ಕೈಯಲ್ಲಿ ತಪ್ಪಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಕೈದಿಯೊಬ್ಬ ಮೊಬೈಲ್​ನ್ನೇ ನುಂಗಿದ ವಿಲಕ್ಷಣ ಘಟನೆಯೊಂದು ದೆಹಲಿಯ ತಿಹಾರ್ ಜೈಲಿನಲ್ಲಿ ವರದಿಯಾಗಿದೆ.

ಜೈಲಾಧಿಕಾರಿಗಳಿಗೆ ತನ್ನ ಬಳಿ ಮೊಬೈಲ್​ ಇದೆ ಎಂದು ತಿಳಿದರೆ ಶಿಕ್ಷೆ ನೀಡುತ್ತಾರೆ ಎಂಬ ಭಯದಲ್ಲಿ ಈ ರೀತಿ ಮಾಡಿದ ಕೈದಿಗೆ ಎಂಡೋಸ್ಕೋಪಿ ಮೂಲಕ ಮೊಬೈಲ್​ನ್ನು ಹೊರತೆಗೆಯಲಾಗಿದೆ. 7 ಸೆಂಟಿಮೀಟರ್​ ಉದ್ದ ಹಾಗೂ 3 ಸೆಂಟಿ ಮೀಟರ್ ಅಗಲದ ಮೊಬೈಲ್​ನ್ನು ವೈದ್ಯರು ಎಂಡೋಸ್ಕೋಪಿ ಮೂಲಕ ಹೊರತೆಗೆದಿದ್ದಾರೆ.

ಕೈದಿಯ ಹೊಟ್ಟೆಯ ಎಕ್ಸ್​ ರೇ ವರದಿ ನೋಡಿದ ಬಳಿಕ ಆತನ ಹೊಟ್ಟೆಯಲ್ಲಿ ಮೊಬೈಲ್​ ಫೋನ್​ ಇರಬಹುದು ಎಂದು ಶಂಕಿಸಿದ್ದೆವು. ಬಾಯಿಯ ಮೂಲಕ ಎಂಡೊಸ್ಕೋಪಿ ಮಾಡಿ ಮೊಬೈಲ್​ನ್ನು ಹೊರತೆಗೆದಿದ್ದೇವೆ ಎಂದು ದೆಹಲಿಯ ಜಿಬಿ ಪಂತ್​ ಆಸ್ಪತ್ರೆಯ ವೈದ್ಯರ ಡಾ. ಸಿದ್ಧಾರ್ಥ್​ ಹೇಳಿದರು.

ಜಿಬಿ ಪಂತ್ ಆಸ್ಪತ್ರೆಯ ವೈದ್ಯ ಸಿದ್ಧಾರ್ಥ್ ಮತ್ತು ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಡಾ ಮನೀಷ್ ತೋಮರ್ ನೇತೃತ್ವದ ತಂಡವು ಈ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿದೆ. ಮೊಬೈಲ್​ ಫೋನ್ ನುಂಗುವುದು ಅಂದರೆ ಸುಲಭದ ಮಾತಲ್ಲ. ಈ ರೀತಿ ಮೊಬೈಲ್ ಫೋನ್ ನುಂಗಲು ಅಭ್ಯಾಸ ಇರುವವರಿಗೆ ಮಾತ್ರ ಇದು ಸಾಧ್ಯ ಎಂದು ಡಾ. ಸಿದ್ಧಾರ್ಥ್ ಹೇಳಿದರು.
ಡಾ ಸಿದ್ಧಾರ್ಥ್ ಪ್ರಕಾರ, ಮೊಬೈಲ್ ಫೋನ್ ನುಂಗಲು ಕಷ್ಟ. ಮತ್ತು ಅದನ್ನು ಅಭ್ಯಾಸ ಇರುವವರು ಮಾತ್ರ ಹಾಗೆ ಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...