alex Certify ತಿಂಡಿ ತಿನ್ನುತ್ತಿದ್ದವರ ಮೇಲೆ ಏಕಾಏಕಿ ನುಗ್ಗಿದ ಕಾರು; ಓರ್ವ ಮಹಿಳೆ ಸಾವು, ಐವರ ಸ್ಥಿತಿ ಚಿಂತಾಜನಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿಂಡಿ ತಿನ್ನುತ್ತಿದ್ದವರ ಮೇಲೆ ಏಕಾಏಕಿ ನುಗ್ಗಿದ ಕಾರು; ಓರ್ವ ಮಹಿಳೆ ಸಾವು, ಐವರ ಸ್ಥಿತಿ ಚಿಂತಾಜನಕ

ಜನ ಸಂದಣಿಯೇ ನೆರೆದಿದ್ದರೂ ಬೀಚ್ ನತ್ತ ಕಾರು ನುಗ್ಗಿಸಿಕೊಂಡು ಬಂದಿದ್ದ ವ್ಯಕ್ತಿಯೊಬ್ಬ ನೋಡ ನೋಡುತ್ತಿದ್ದಂತೆ ಅಲ್ಲಿದ್ದ ಅಂಗಡಿಯೊಂದಕ್ಕೆ ಗುದ್ದಿ ಮಹಿಳೆಯ ಸಾವಿಗೆ ಕಾರಣವಾಗಿದ್ದಾರೆ.

ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಚಿಂಚನಿ ಬೀಚ್ ನಲ್ಲಿ ನಡೆದಿದೆ.

ಬುಧವಾರ ರಜೆ ಇರುವ ಹಿನ್ನೆಲೆಯಲ್ಲಿ ಈ ಬೀಚ್ ಗೆ ಹೆಚ್ಚಿನ ಜನರು ಆಗಮಿಸಿದ್ದರು. ಆದರೂ ಈ ವ್ಯಕ್ತಿ ಕಾರನ್ನು ವೇಗವಾಗಿ ತೆಗೆದುಕೊಂಡು ಬಂದು, ಬೈಕ್ ನ್ನು ದಾಟಲು ಹೋಗಿ ಅಲ್ಲಿದ್ದ ಅಂಗಡಿಯೊಂದರೊಳಗೆ ನುಗ್ಗಿಸಿದ್ದಾನೆ. ಆ ಸಂದರ್ಭದಲ್ಲಿ ಅಂಗಡಿಯಲ್ಲಿ ಕುಳಿತು ಹಲವರು ಉಪಹಾರ ಸೇವಿಸುತ್ತಿದ್ದರು. ಹೀಗೆ ಸೇವಿಸುತ್ತಿದ್ದ ವ್ಯಕ್ತಿಗಳ ಮೇಲೆಯೇ ಕಾರು ಹರಿದಿದೆ.

ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಅಲ್ಲಿದ್ದ ಸ್ಥಳೀಯರು ಹಾಗೂ ಪ್ರವಾಸಿಗರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿದ್ದ ಜನರು ಉದ್ರಿಕ್ತಗೊಂಡು ಕಾರಿನ ಹಲವು ಭಾಗಗಳನ್ನು ಪುಡಿ ಪುಡಿ ಮಾಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕೂಡಲೇ ಆಗಮಿಸಿದ ಪೊಲೀಸರು, ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.

ಈ ಕುರಿತು ವಂಗಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...