alex Certify ತಪ್ಪು ಮಾಡಿದ ಪುತ್ರನಿಗೆ ವಿಚಿತ್ರ ಶಿಕ್ಷೆ ನೀಡಿ ಬುದ್ಧಿ ಹೇಳಿದ ಪೋಷಕರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಪ್ಪು ಮಾಡಿದ ಪುತ್ರನಿಗೆ ವಿಚಿತ್ರ ಶಿಕ್ಷೆ ನೀಡಿ ಬುದ್ಧಿ ಹೇಳಿದ ಪೋಷಕರು….!

ತಪ್ಪು ಮಾಡಿದ ಮಕ್ಕಳಿಗೆ ಬೈಯ್ದು ಅಥವಾ ಥಳಿಸಿ ಬುದ್ಧಿ ಹೇಳುವುದನ್ನು ನಾವು ಕಂಡಿದ್ದೇವೆ. ಆದರೆ, ಯುಎಸ್ ನಲ್ಲಿನ ಪೋಷಕರು ವಿಚಿತ್ರವಾಗಿ ಶಿಕ್ಷೆ ನೀಡಿ ಬುದ್ಧಿ ಹೇಳಿದ್ದಾರೆ.

ಈ ಘಟನೆ ಯುಎಸ್ ನಲ್ಲಿ ನಡೆದಿದ್ದು, ಪ್ಲೋರಿಡಾದ ಗೆಲ್ವಿನ್ ಕ್ಲೈನ್ ಎಂಬುವವರು ಈ ಕುರಿತ ವಿಡಿಯೋ ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಲ್ಲಿ ತಪ್ಪು ಮಾಡಿದ ಮಗನಿಗೆ ಪಾಲಕರು ನಾನು ಪುಂಡ ಎನ್ನುವ ಬೋರ್ಡ್ ಕೊಟ್ಟು ರಸ್ತೆಯ ಹತ್ತಿರ ನಿಲ್ಲಿಸಿದ್ದಾರೆ.

ಕಾಂಗೋದಲ್ಲಿ ಆತ್ಮಾಹುತಿ ಬಾಂಬ್ ದಾಳಿ – ಐವರು ಬಲಿ

ಈ ಬೋರ್ಡ್ ನಲ್ಲಿ ನಾನೊಬ್ಬ ಪುಂಡ. ನೀವು ಪುಂಡರನ್ನು ದ್ವೇಷಿಸುವುದಾದರೆ ಹಾರ್ನ್ ಹಾಕಿರಿ ಎಂದು ಬರೆದಿತ್ತು. ಅಲ್ಲದೇ, ಬಾಲಕನ ಹತ್ತಿರವೇ ತಂದೆ – ತಾಯಿ ಕುಳಿತಿದ್ದಾರೆ. ಆದರೆ, ಬಾಲಕ ಯಾವ ತಪ್ಪು ಮಾಡಿದ್ದಾನೆ ಎಂಬ ಕುರಿತು ಮಾಹಿತಿ ತಿಳಿದು ಬಂದಿಲ್ಲ.

ಪಾಲಕರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಸಾರ್ವಜನಿಕರಿಂದ ಬಾಲಕ ಬುದ್ಧಿ ಕಲಿಯಲು ಆಗುವುದಿಲ್ಲ. ಶಿಸ್ತಿನ ವೇಷದಲ್ಲಿ ಈ ರೀತಿಯ ಶಿಕ್ಷೆ ನೀಡುವುದು ತಪ್ಪು ಎಂದು ಹಲವರು ಕಮೆಂಟ್ ಮಾಡಿದ್ದರೆ, ಹಲವರು ಆತನ ಮನಸ್ಸು ಘಾಸಿಗೊಳಿಸಲಾಗಿದೆ. ಆತನ ತಪ್ಪಿಗೆ ಮನೆಯಲ್ಲಿಯೇ ಬುದ್ಧಿ ಹೇಳಿ ತಿದ್ದಬೇಕಿತ್ತು. ಹೀಗೆ ಬೀದಿಗೆ ತರಬಾರದಿತ್ತು ಎಂದು ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...