alex Certify ತನ್ನ ಶ್ರೇಯಸ್ಸಿನ ಕಾರಣ ಬಿಚ್ಚಿಟ್ಟ ಶ್ರೀಮಂತ ಉದ್ಯಮಿ; ಈ ಕಾರಣಕ್ಕೆ ಮೂಗು ಮುರಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಶ್ರೇಯಸ್ಸಿನ ಕಾರಣ ಬಿಚ್ಚಿಟ್ಟ ಶ್ರೀಮಂತ ಉದ್ಯಮಿ; ಈ ಕಾರಣಕ್ಕೆ ಮೂಗು ಮುರಿದ ನೆಟ್ಟಿಗರು

ಬಹು ಮಿಲಿಯನ್ ಡಾಲರ್ ಕಂಪೆನಿಯ ಉದ್ಯಮಿಯೊಬ್ಬರು ತಮ್ಮ ವೇಳಾಪಟ್ಟಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರ ಶ್ಲಾಘನೆಗೆ ಕಾಯುತ್ತಿದ್ದರು. ಆದರೆ ಎಲ್ಲರೂ ಮಾಡುವಂತೆ ಇವರೂ ಮಾಡುತ್ತಿರುವ ಕಾರಣ, ಇದೇನು ಹೊಸ ವಿಷಯವಲ್ಲ ಎಂದು ನೆಟ್ಟಿಗರು ಕಮೆಂಟ್‌ ಹಾಕುತ್ತಿದ್ದು, ಉದ್ಯಮಿಯನ್ನು ನಿರಾಸೆಗೊಳಿಸಿದೆ.

ಲೀಲಾ ಹಾರ್ಮೋಜಿ ಅವರು ತಮ್ಮ ದಿನಚರಿಯ ಕುರಿತು ಮಾಹಿತಿ ಶೇರ್‌ ಮಾಡಿಕೊಂಡಿದ್ದಾರೆ. ನಾನು ವ್ಯವಸ್ಥಾಪಕ ಪಾಲುದಾರಳು. ವ್ಯಾಪಾರ ಹೂಡಿಕೆ ಕಂಪನಿಯಾದ ಅಕ್ವಿಸಿಷನ್‌ನ ಸಿಇಒ ಎಂದಿರುವ ಇವರು, ತಮ್ಮ ಕೆಲಸದ ಕುರಿತು ಮಾಹಿತಿ ನಿಡಿದ್ದಾರೆ.

ಕಠಿಣ ಪರಿಶ್ರಮದಿಂದ ತಾನು ಇಷ್ಟು ಮೇಲೆ ಬಂದೆ ಎಂದು ಹೇಳಿಕೊಂಡಿರುವ ಈಕೆ, $ 200 ಮಿಲಿಯನ್ ವ್ಯವಹಾರದ ಪೋರ್ಟ್‌ಫೋಲಿಯೊ ಹೊಂದುವುದು ಸುಲಭವಲ್ಲ, ಅದು ನನ್ನ ಸತತ ಶ್ರಮದ ಫಲ ಎಂದಿದ್ದಾರೆ.

“ನನಗೆ 30 ವರ್ಷ. ಮತ್ತು ನಾನು $200M ಪೋರ್ಟ್‌ಫೋಲಿಯೊ ವ್ಯವಹಾರಗಳನ್ನು ನಡೆಸುತ್ತಿದ್ದೇನೆ,” ಎಂದು ಹೇಳಿಕೊಂಡಿರುವ ಲೀಲಾ, ನಾನು ದಿನವೂ 4 ಅಥವಾ 5 ಗಂಟೆಗೆ ಏಳುತ್ತೇನೆ. ಸಾಮಾಜಿಕ ಮಾಧ್ಯಮವನ್ನು ಪರಿಶೀಲಿಸುವ ಬದಲು, ಕಾಫಿಯನ್ನು ಆನಂದಿಸಿ ವರ್ಕ್‌ಔಟ್ ಮಾಡುತ್ತೇನೆ. ಜಿಮ್ ಅವಧಿಯಲ್ಲಿ, ಪಾಡ್‌ ಕಾಸ್ಟ್‌ಗಳು, ಆಡಿಯೊಬುಕ್‌ಗಳು ಅಥವಾ ಕೆಲವು ಸಂಗೀತವನ್ನು ಕೇಳಲು ಇಷ್ಟಪಡುತ್ತೇನೆ. ಕೆಲವೊಮ್ಮೆ ಸ್ನಾನ ಮಾಡದೆಯೂ ಕೆಲಸಕ್ಕೆ ಹೋಗುತ್ತೇನೆ. ನನ್ನ ಅಡುಗೆಯ ಸಮಯ ಉಳಿಸಲು ಹೊರಗಡೆ ತಿನ್ನುತ್ತೇನೆ ಎಂದಿದ್ದಾರೆ.

ಇದರಲ್ಲಿ ಹೊಸತು ಏನಿದೆ ಎಂದು ನೆಟ್ಟಿಗರು ಪ್ರಶ್ನಿಸಿದ್ದು, ತಮ್ಮನ್ನು ತಾವು ಈಕೆ ಹೊಗಳಿಕೊಂಡಿರುವ ರೀತಿಗೆ ಅಸಮಾಧಾನವನ್ನೂ ವ್ಯಕ್ತಪಡಿಸುತ್ತಿದ್ದಾರೆ.

— Leila Hormozi (@LeilaHormozi) December 2, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...