alex Certify ತನ್ನ ಮಗಳ ಹೆಸರನ್ನು ಯಾರೂ ಇರಿಸಿಕೊಳ್ಳುವಂತಿಲ್ಲವೆಂದು ಆದೇಶಿಸಿದ ಉತ್ತರ ಕೊರಿಯಾ ಸರ್ವಾಧಿಕಾರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಮಗಳ ಹೆಸರನ್ನು ಯಾರೂ ಇರಿಸಿಕೊಳ್ಳುವಂತಿಲ್ಲವೆಂದು ಆದೇಶಿಸಿದ ಉತ್ತರ ಕೊರಿಯಾ ಸರ್ವಾಧಿಕಾರಿ….!

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತನ್ನ ವಿಚಿತ್ರ ಆದೇಶಗಳಿಗೆ ಹೆಸರುವಾಸಿ. ಈ ಹಿಂದೆ ದೇಶವಾಸಿಗಳು ತನ್ನಂತೆಯೇ ಕಟಿಂಗ್ ಮಾಡಿಸಿಕೊಳ್ಳಬೇಕೆಂದು ಸೂಚನೆ ಹೊರಡಿಸಿದ್ದ ಕಿಮ್ ಜಾಂಗ್ ಉನ್ ಈಗ ಮತ್ತೊಂದು ಆದೇಶದ ಮೂಲಕ ಸುದ್ದಿಯಾಗಿದ್ದಾರೆ.

ಉತ್ತರ ಕೊರಿಯಾದ ಸಾರ್ವಜನಿಕರು ತನ್ನ ಮಗಳು ಕಿಮ್ ಜು ಎ (Kim ju Ae) ಹೆಸರನ್ನು ಇರಿಸಿಕೊಳ್ಳುವಂತಿಲ್ಲ ಎಂದು ಆದೇಶಿಸಲಾಗಿದ್ದು, ಹಾಗೊಮ್ಮೆ ಯಾರಾದರೂ ಈಗಾಗಲೇ ಇರಿಸಿಕೊಂಡಿದ್ದರೆ ಒಂದು ವಾರದೊಳಗೆ ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಹಾಜರಾಗಿ ಹೆಸರು ಬದಲಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಕಿಮ್ ಜಾಂಗ್ ಉನ್ ಪುತ್ರಿಗೆ ಈಗ 9 ವರ್ಷವಾಗಿದ್ದು, ಇತ್ತೀಚೆಗಷ್ಟೇ ಆಕೆ ತನ್ನ ತಂದೆಯೊಂದಿಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಳು. ಕಿಮ್ ಜಾಂಗ್ ಉನ್ ಗೆ ಒಟ್ಟು ಮೂವರು ಮಕ್ಕಳು ಇದ್ದು, ಪುತ್ರಿ ಕಿಂಗ್ ಜು ಎ ತನ್ನ ತಂದೆಯ ಉತ್ತರಾಧಿಕಾರಿಯಾಗಲಿದ್ದಾಳೆ ಎಂದು ಹೇಳಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...