alex Certify ತನಗಿಂತ 15 ವರ್ಷ ಕಿರಿಯನಾದ ಬಾಯ್ ಫ್ರೆಂಡ್ ಗೆ ಸಂಬಳ ನೀಡ್ತಾಳೆ ಮಹಿಳೆ..! ಹುಬ್ಬೇರಿಸುವಂತಿದೆ ತಿಂಗಳಿಗೆ ಆಕೆ ಮಾಡುವ ಖರ್ಚು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನಗಿಂತ 15 ವರ್ಷ ಕಿರಿಯನಾದ ಬಾಯ್ ಫ್ರೆಂಡ್ ಗೆ ಸಂಬಳ ನೀಡ್ತಾಳೆ ಮಹಿಳೆ..! ಹುಬ್ಬೇರಿಸುವಂತಿದೆ ತಿಂಗಳಿಗೆ ಆಕೆ ಮಾಡುವ ಖರ್ಚು

ಜಗತ್ತಿನಲ್ಲಿ ಚಿತ್ರ-ವಿಚಿತ್ರ ಜನರಿರ್ತಾರೆ. ಕೆಲವರು ಮನೆ ಕೆಲಸಕ್ಕೆ ಬರುವವರಿಗೆ ಸರಿಯಾಗಿ ಸಂಬಳ ನೀಡುವುದಿಲ್ಲ. ಆದ್ರೆ ಇಲ್ಲೊಬ್ಬ ಮಹಿಳೆ ತನ್ನ ಬಾಯ್ ಫ್ರೆಂಡ್ ಗೆ ಸಂಬಳ ನೀಡ್ತಿದ್ದಾಳೆ. ಟಿಕ್ ಟಾಕ್ ನಲ್ಲಿ ಮಹಿಳೆಯೊಬ್ಬಳು ಈ ವಿಷ್ಯವನ್ನು ಹೇಳಿದ್ದಾಳೆ.

41 ವರ್ಷದ ಜೂಲಿ ಹೆಸರಿನ ಮಹಿಳೆ @julie.withthebooty ಟಿಕ್ ಟಾಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ತನ್ನ ಬಾಯ್ ಫ್ರೆಂಡ್ ಬಗ್ಗೆ ಹೇಳಿದ್ದಾಳೆ. ಆಕೆ ಬಾಯ್ ಫ್ರೆಂಡ್ ಆಕೆಗಿಂತ 15 ವರ್ಷ ಚಿಕ್ಕವನಂತೆ. 29 ವರ್ಷದ ಬಾಯ್ ಫ್ರೆಂಡ್ ಗೆ ಆಕೆ ತಿಂಗಳಿಗೆ 11 ಲಕ್ಷ ರೂಪಾಯಿ ಸಂಬಳ ನೀಡ್ತಾಳಂತೆ. ಅತಿ ಹೆಚ್ಚು ಅಂದ್ರೆ 15 ಲಕ್ಷ ರೂಪಾಯಿ ಖರ್ಚು ಮಾಡ್ತಾಳಂತೆ. ಆತನಿಗೆ ಸಂಬಳ ನೀಡುವ ಜೂಲಿ, ಆತ ಕೇಳಿದ್ದೆಲ್ಲವನ್ನೂ ಕೊಡಿಸುತ್ತಾಳಂತೆ.

ದುರ್ಗಾ ಪೂಜಾ ಪೆಂಡಾಲ್‌ ನಲ್ಲಿ ಹಿಂದೂಗಳನ್ನು ಹೊರತುಪಡಿಸಿ ಅನ್ಯ ಧರ್ಮೀಯರಿಗಿಲ್ಲ ಪ್ರವೇಶ

ಇದಕ್ಕೆ ಬದಲಾಗಿ ಆಕೆ ಬಾಯ್ ಫ್ರೆಂಡ್ ಆಕೆಗೆ ಎಲ್ಲ ಕೆಲಸದಲ್ಲೂ ನೆರವಾಗ್ತಾನಂತೆ. ಇಬ್ಬರು ಅಡಿಗೆಯಿಂದ ಹಿಡಿದು ಈಜುಕೊಳದ ಕ್ಲೀನಿಂಗ್ ವರೆಗೆ ಎಲ್ಲವನ್ನೂ ಮಾಡ್ತಾರಂತೆ.

ಆಕೆ ಈ ವಿಷ್ಯವನ್ನು ಹೇಳ್ತಿದ್ದಂತೆ ಜನರು ಕಮೆಂಟ್ ಮಾಡಲು ಶುರು ಮಾಡಿದ್ದಾರೆ. ವಯಸ್ಸಿನ ಬಗ್ಗೆ ಕಮೆಂಟ್ ಮಾಡಿದ್ದಾರೆ. ಜೊತೆಗೆ ಕೆಲವೇ ದಿನಗಳಲ್ಲಿ ನಿನ್ನ ಬಾಯ್ ಫ್ರೆಂಡ್ ನಿನ್ನನ್ನು ಬಿಟ್ಟು ಹೋಗ್ತಾನೆ ಎಂದಿದ್ದಾರೆ. ಆದ್ರೆ ಇದಕ್ಕೆ ಜೂಲಿ ಸರಿಯಾದ ಉತ್ತರ ನೀಡಿದ್ದಾಳೆ. ನನಗಲ್ಲ ಆತನಿಗೆ ಭಯವಿದೆ. ಎಲ್ಲಿ ನಾನು ಬಿಟ್ಟುಹೋದ್ರೆ ಎಂಬ ಭಯವಿದೆ ಎಂದಿದ್ದಾಳೆ. ಜೂಲಿ ಅತ್ಯಂತ ಶ್ರೀಮಂತ ಮಹಿಳೆಯಂತೆ. ಆಕೆ ಬಳಿ ಹಣ, ಬಂಗಲೆ, ಐಷಾರಾಮಿ ವಾಹನ ಸೇರಿದಂತೆ ಎಲ್ಲ ಸೌಲಭ್ಯವಿದೆಯಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...