alex Certify ತಂದೆ ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದ್ದಕ್ಕೆ ಖುಷಿಯಿಂದ ಕುಪ್ಪಳಿಸಿದ ಪುಟ್ಟ ಬಾಲಕ: ಹೃದಯಸ್ಪರ್ಶಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದ್ದಕ್ಕೆ ಖುಷಿಯಿಂದ ಕುಪ್ಪಳಿಸಿದ ಪುಟ್ಟ ಬಾಲಕ: ಹೃದಯಸ್ಪರ್ಶಿ ವಿಡಿಯೋ ವೈರಲ್

ಸಣ್ಣ-ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವುದು ಜೀವನದ ಬಹಳ ದೊಡ್ಡ ಉಡುಗೊರೆಯಾಗಿರುತ್ತದೆ. ಅದು ಏನೇ ಆಗಿರಲಿ, ನಾವು ಕಷ್ಟಪಟ್ಟು ದುಡಿದ ಹಣದಿಂದ ಯಾವುದೇ ವಸ್ತುವನ್ನು ಖರೀದಿಸಿದ್ರೂ ಅದರ ಸಂತೋಷ ನೂರು ಪಟ್ಟು ಹೆಚ್ಚೇ ಇರುತ್ತದೆ. ಇದೀಗ ಇಂಥದ್ದೇ ಒಂದು ಮನೋಜ್ಞ ವಿಡಿಯೋವೊಂದನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಪೋಸ್ಟ್ ಮಾಡಿದ್ದಾರೆ.

ತಂದೆಯೊಬ್ಬರು ಹೊಸ ಬೈಸಿಕಲ್ ತಂದಾಗ ಅದನ್ನು ನೋಡಿದಂತಹ ಅವರ ಮಗ, ಪುಟ್ಟ ಬಾಲಕ ಸಂತೋಷದಿಂದ ಕುಣಿಯುತ್ತಿರುವ ವಿಡಿಯೋವನ್ನು ಅಧಿಕಾರಿ ಹಂಚಿಕೊಂಡಿದ್ದಾರೆ. ಅವರು ಖರೀದಿಸಿದ್ದು ಸೆಕೆಂಡ್ ಹ್ಯಾಂಡ್ ಬೈಸಿಕಲ್ ಆಗಿದ್ದರೂ ಕೂಡ, ಮರ್ಸಿಡೆಸ್ ಬೆನ್ಜ್ ಖರೀದಿಸುವವರಿಗಿಂತಲೂ ಜಾಸ್ತಿಯೇ ತಂದೆ-ಮಗ ಹರ್ಷ ವ್ಯಕ್ತಪಡಿಸಿದ್ದಾರೆ.

ಬಾಲಕ ಸಂತೋಷದಿಂದ ಜಿಗಿಯುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ತನ್ನ ಹೊಸ ಸೆಕೆಂಡ್ ಹ್ಯಾಂಡ್ ಸೈಕಲ್‌ಗೆ ಹಾರ ಹಾಕಿ ಪೂಜೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಅವರ ಪುತ್ರನ ಸಂತೋಷಕ್ಕೆ ಪಾರಲೇ ಇರಲಿಲ್ಲ. ಬಹಳ ಸಂಭ್ರಮದಿಂದ ಬಾಲಕ ಮೇಲಕ್ಕೆ, ಕೆಳಕ್ಕೆ ಜಿಗಿದಿದ್ದಾನೆ. ಬಾಲಕ ತನ್ನ ತಂದೆಯೊಂದಿಗೆ ಸೈಕಲ್‌ಗೆ ಪೂಜೆ ಸಲ್ಲಿಸಿದ ಕ್ಷಣ ಹೃದಯಸ್ಪರ್ಶಿಯಾಗಿದೆ. ಈ ವಿಡಿಯೋವನ್ನು 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ತಂದೆ-ಮಗನ ಸಂತೋಷವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.

— Awanish Sharan (@AwanishSharan) May 21, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...