alex Certify ತಂದೆ ಆಸ್ತಿಯಲ್ಲಿ ಮಗಳಿಗೂ ಸಮಾನ ಪಾಲು; ಹೈಕೋರ್ಟ್ ಮಹತ್ವದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ ಆಸ್ತಿಯಲ್ಲಿ ಮಗಳಿಗೂ ಸಮಾನ ಪಾಲು; ಹೈಕೋರ್ಟ್ ಮಹತ್ವದ ಆದೇಶ

ಪ್ರಕರಣ ಒಂದರ ವಿಚಾರಣೆ ವೇಳೆ ತಂದೆ ಆಸ್ತಿ ಹಂಚಿಕೆ ಕುರಿತಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ತಂದೆ ಆಸ್ತಿಯಲ್ಲಿ ಪುತ್ರನ ಜೊತೆಗೆ ಪುತ್ರಿಯೂ ಸಹ ಸಮಾನ ಪಾಲು ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದ್ದು, ಇದರಿಂದಾಗಿ ಸಿವಿಲ್ ನ್ಯಾಯಾಲಯ ನೀಡಿದ್ದ ತೀರ್ಪು ಎತ್ತಿ ಹಿಡಿದಂತಾಗಿದೆ.

ಪ್ರಕರಣದ ವಿವರ: ತುಮಕೂರಿನ ಯಲ್ಲಾಪುರ ಗ್ರಾಮದ ಕಲಗಿರಿಯಪ್ಪ ಎಂಬುವರಿಗೆ ಗೋವಿಂದಯ್ಯ ಹಾಗೂ ಲಕ್ಷ್ಮೀದೇವಿ ಎಂಬ ಇಬ್ಬರು ಮಕ್ಕಳಿದ್ದು, ಕಲಗಿರಿಯಪ್ಪ ಹೆಸರಿನಲ್ಲಿ ಎರಡು ಎಕರೆ ಜಮೀನು ಇತ್ತು. 1964 ರಲ್ಲಿ ಕಲಗಿರಿಯಪ್ಪ ಮೃತಪಟ್ಟಿದ್ದು, ಎರಡು ಎಕರೆ ಜಮೀನನ್ನು ಕಲಗಿರಿಯಪ್ಪ ಪುತ್ರ ಗೋವಿಂದಯ್ಯ ನೋಡಿಕೊಳ್ಳುತ್ತಿದ್ದರು.

ಇದರ ಮಧ್ಯೆ ಗೋವಿಂದಯ್ಯ ಸಹ ಮೃತಪಟ್ಟಿದ್ದು ಆ ಬಳಿಕ ಆತನ ಪತ್ನಿ ವೆಂಕಟಲಕ್ಷ್ಮಮ್ಮ ಹಾಗೂ ಪುತ್ರ ವೆಂಕಟೇಶ್, ಜಮೀನನ್ನು ತಮ್ಮ ಸ್ವಾಧೀನದಲ್ಲಿ ಇಟ್ಟುಕೊಂಡಿದ್ದು, ಇದರಲ್ಲಿ ಪಾಲು ನೀಡಬೇಕೆಂದು ಕೋರಿ ಲಕ್ಷ್ಮೀದೇವಮ್ಮ 2011ರಲ್ಲಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ದರು. 2018 ರಲ್ಲಿ ತೀರ್ಪು ಹೊರ ಬಿದ್ದಿದ್ದು ಲಕ್ಷ್ಮೀದೇವಮ್ಮ ಅವರಿಗೆ ಪಾಲು ನೀಡುವಂತೆ ಆದೇಶಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಗೋವಿಂದಯ್ಯ ಪತ್ನಿ ವೆಂಕಟಲಕ್ಷ್ಮಮ್ಮ ಹಾಗೂ ಪುತ್ರ ವೆಂಕಟೇಶ್ ಹೈಕೋರ್ಟ್ ಮೆಟ್ಟಿಲೇರಿದ್ದು, ತಂದೆ ಆಸ್ತಿಯಲ್ಲಿ ಮಗಳಿಗೂ ಸಮಪಾಲು ನೀಡುವಂತೆ ಆದೇಶಿಸಿರುವ ಹೈಕೋರ್ಟ್, ಸಿವಿಲ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...