ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ತಮ್ಮ ತಂಡದ ಟ್ವಿಟರ್ ಖಾತೆಯ ವಿರುದ್ಧ ಗರಂ ಆಗಿದ್ದಾರೆ. ಸ್ಯಾಮ್ಸನ್ ಆಕ್ರೋಶ ವ್ಯಕ್ತಪಡಿಸಿದ ಬಳಿಕ ರಾಜಸ್ಥಾನ ರಾಯಲ್ಸ್ ತಂಡದ ಟ್ವಿಟರ್ ಖಾತೆಯಿಂದ ಸ್ಯಾಮ್ಸನ್ರ ಫೋಟೋವನ್ನು ಡಿಲೀಟ್ ಮಾಡಲಾಗಿದೆ.
ಸಂಜು ಸ್ಯಾಮ್ಸನ್ರ ಫೋಟೋ ಶಾಪ್ ಮಾಡಿದ್ದ ಫೋಟೋವನ್ನು ರಾಜಸ್ಥಾನ ರಾಯಲ್ಸ್ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿ ‘ಕ್ಯಾ ಖೂಬ್ ಲಗ್ತೇ ಹೋ’ ಎಂದು ಶೀರ್ಷಿಕೆ ನೀಡಲಾಗಿತ್ತು.
ಈ ಫೋಟೋವನ್ನು ಕಂಡು ಕೆಂಡಾಮಂಡಲರಾದ ಸ್ಯಾಮ್ಸನ್ ಸ್ನೇಹಿತರು ಈ ರೀತಿ ಮಾಡುವುದು ಸರಿ. ಆದರೆ ತಂಡಗಳು ವೃತ್ತಿಪರವಾಗಿ ಇರಬೇಕು ಎಂದು ಟಾಂಗ್ ನೀಡಿದ್ದಾರೆ.
ಸ್ಯಾಮ್ಸನ್ರ ಪ್ರತಿಕ್ರಿಯೆ ನೋಡುತ್ತಿದ್ದಂತೆಯೇ ರಾಜಸ್ಥಾನ್ ರಾಯಲ್ಸ್ ಅಧಿಕೃತ ಟ್ವಿಟರ್ ಖಾತೆಯಿಂದ ಈ ಫೋಟೋವನ್ನು ಡಿಲೀಟ್ ಮಾಡಿದೆ.
https://twitter.com/IamSanjuSamson/status/1507303756341334016