alex Certify ಡ್ರೈ ಹೇರ್ ಸಮಸ್ಯೆಯೇ…..? ಹೀಗೆ ನಿವಾರಿಸಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರೈ ಹೇರ್ ಸಮಸ್ಯೆಯೇ…..? ಹೀಗೆ ನಿವಾರಿಸಿಕೊಳ್ಳಿ

ಮುಲ್ತಾನಿ ಮಿಟ್ಟಿಯನ್ನು ಹೆಚ್ಚಾಗಿ ಚರ್ಮದ ಆರೈಕೆಗೆ ಬಳಸುತ್ತಾರೆ. ಆದರೆ ಇದರಿಂದ ಕೂದಲಿನ ಆರೋಗ್ಯವನ್ನು ಕೂಡ ಕಾಪಾಡಬಹುದು. ಮುಲ್ತಾನಿ ಮಿಟ್ಟಿಯನ್ನು ಕೂದಲಿಗೆ ಬಳಸುವುದರಿಂದ ನೆತ್ತಿಯ ಕೊಳೆಯನ್ನು ತೆಗೆದು ಹಾಕುತ್ತದೆ. ನೆತ್ತಿಗೆ ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತದೆ. ಇದು ಕೂದಲಿನ ಬೆಳವಣಿಗೆಗೆ ಸಹಕಾರಿ. ಈ ಮುಲ್ತಾನಿ ಮಿಟ್ಟಿ ಬಳಸಿ ಒಣ ಕೂದಲಿನ ಸಮಸ್ಯೆಯನ್ನು ಹೇಗೆ ನಿವಾರಿಸಬಹುದು ಎಂಬುದನ್ನು ತಿಳಿದುಕೊಳ್ಳಿ.

4 ಚಮಚ ಮುಲ್ತಾನಿ ಮಿಟ್ಟಿಗೆ ½ ಕಪ್ ಮೊಸರು, ಅರ್ಧ ನಿಂಬೆ ರಸ, 2 ಚಮಚ ಜೇನುತುಪ್ಪ ಇವಿಷ್ಟನ್ನು ಒಂದು ಕಪ್ ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಪೇಸ್ಟ್ ನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ. ಕವರ್ ಮಾಡಿ. ಬಳಿಕ 20 ನಿಮಿಷ ಬಿಟ್ಟು ತ ವಾಶ್ ಮಾಡಿ. ಕಂಡಿಷನರ್ ನ್ನು ಬಳಸಿ. ಇದನ್ನು ವಾರಕ್ಕೆ 1-2 ಬಾರಿ ಬಳಸಿ.

ಮೊಸರು ನಿಮ್ಮ ಕೂದಲಿಗೆ ಕಂಡೀಷನರ್ ಆಗಿ ಕಾರ್ಯನಿರ್ವಹಿಸುತ್ತದೆ. ಜೇನುತುಪ್ಪ ತೇವಾಂಶವನ್ನು ಲಾಕ್ ಮಾಡಲು ಸಹಾಯ ಮಾಡುತ್ತದೆ. ನಿಂಬೆ ರಸದಲ್ಲಿರುವ ವಿಟಮಿನ್ ಸಿ ಆರೋಗ್ಯಕರ ಕೂದಲಿನ ಬೆಳವಣೆಗೆಯನ್ನು ಉತ್ತೇಜಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...