alex Certify ಡಬ್ಲಿನ್ ಬೀದಿಗಳಲ್ಲಿ ‘ಸೋನಾ ಕಿತ್ನಾ ಸೋನಾ ಹೈ’ ಎಂದು ಕುಣಿದ ಧನಶ್ರೀ ವರ್ಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಬ್ಲಿನ್ ಬೀದಿಗಳಲ್ಲಿ ‘ಸೋನಾ ಕಿತ್ನಾ ಸೋನಾ ಹೈ’ ಎಂದು ಕುಣಿದ ಧನಶ್ರೀ ವರ್ಮಾ

ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿರುವವರ ಸಂಖ್ಯೆ ಹೆಚ್ಚಿದೆ. ಇದೀಗ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ಅವರು ಡಬ್ಲಿನ್ ಬೀದಿಗಳಲ್ಲಿ ಅಡ್ಡಾಡುತ್ತಿರುವಾಗ 90 ರ ದಶಕದ ಹಿಟ್ ಬಾಲಿವುಡ್ ಹಾಡಿಗೆ ನೃತ್ಯ ಮಾಡಿದ್ದಾರೆ. ಅವರ ಈ ಡಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಹೌದು, ಧನಶ್ರೀ ಅವರು ಬಾಲಿವುಡ್ ನಟ ಗೋವಿಂದ ಮತ್ತು ನಟಿ ಕರಿಷ್ಮಾ ಕಪೂರ್ ಅವರ ಸೋನಾ ಕಿತ್ನಾ ಸೋನಾ ಹೈ ಹಾಡಿಗೆ ನೃತ್ಯ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 90ರ ದಶಕದ ಜನಪ್ರಿಯ ಹಾಡಿಗೆ ನೃತ್ಯ ಮಾಡುವ ವಿಡಿಯೋವನ್ನು ಧನಶ್ರೀ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಧನಶ್ರೀ ಅವರ ಚಮತ್ಕಾರಿ ಹೆಜ್ಜೆ ನೆಟ್ಟಿಗರನ್ನು ಸಂತೋಷಗೊಳಿಸಿದೆ. ಇನ್ಸ್ಚಾಗ್ರಾಂ ಬಳಕೆದಾರರು ಧನಶ್ರೀ ಅವರ ನೃತ್ಯವನ್ನು ಮನಸಾರೆ ಇಷ್ಟಪಟ್ಟಿದ್ದಾರೆ. ಬಿಳಿ ಬಣ್ಣದ ಪ್ಯಾಂಟ್, ಕೋಟ್ ಮತ್ತು ಬ್ರೇಸ್ ಲೆಟ್ ಧರಿಸಿದ್ದಾರೆ. ಇನ್ಸ್ಟಾಗ್ರಾಂ ಬಳಕೆದಾರರು ಆಕೆಯ ನೃತ್ಯದ ಚಲನೆಯನ್ನು ಸಂಪೂರ್ಣವಾಗಿ ಇಷ್ಟಪಟ್ಟಿದ್ದಾರೆ. ಕಾಮೆಂಟ್‌ಗಳ ವಿಭಾಗವು ಪ್ರೀತಿ ಮತ್ತು ಫೈರ್ ಎಮೋಜಿಗಳಿಂದ ತುಂಬಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...