alex Certify ಟೆಲಿಟಬ್ಬಿ ಪ್ರತಿಮೆ ಒಡೆದ ಮಗ; ಮೂರು ಲಕ್ಷ ದಂಡ ಕಟ್ಟಿದ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೆಲಿಟಬ್ಬಿ ಪ್ರತಿಮೆ ಒಡೆದ ಮಗ; ಮೂರು ಲಕ್ಷ ದಂಡ ಕಟ್ಟಿದ ತಂದೆ

ಶಾಪಿಂಗ್ ಮಾಲ್‌ನಲ್ಲಿ ತನ್ನ ಮಗ‌ ಟೆಲಿಟಬ್ಬಿ ಪ್ರತಿಮೆ ನಾಶ ಮಾಡಿದ್ದರಿಂದ ಭಾರಿ ಪರಿಹಾರವನ್ನು ಕಟ್ಟಬೇಕಾಗಿಬಂದ ಪ್ರಸಂಗ ಹಾಂಕ್ ಕಾಂಗ್‌ನಲ್ಲಿ ನಡೆದಿದೆ.

ಹಾಂಗ್ ಕಾಂಗ್‌ನ ಮೊಂಕಾಕ್ ಜಿಲ್ಲೆಯ ಲಾಂಗ್‌ಹ್ಯಾಮ್ ಪ್ಲೇಸ್ ಶಾಪಿಂಗ್ ಮಾಲ್‌ನಲ್ಲಿರುವ ಆಟಿಕೆ ಅಂಗಡಿಯಲ್ಲಿ ಈ ಘಟನೆ ನಡೆದಿದೆ.

ಚೆಂಗ್ ಎಂಬಾತ ಮೊಬೈಲ್ ಕರೆ ಸ್ವೀಕರಿಸಲು ಆಟಿಕೆ ಮಳಿಗೆಯಿಂದ ಹೊರಬಂದಿದ್ದರು, ಈ ವೇಳೆ ಆಟಿಕೆ ಅಂಗಡಿಯೊಳಗೆ ಜೋರಾಗಿ ಶಬ್ದ ಕೇಳಿಸಿದೆ. ಆತ ಒಳಗೆ ಹೋದಾಗ ತನ್ನ ಮಗ ನಿಶ್ಯಬ್ಧವಾಗಿ ನಿಂತು ಟೆಲಿಟುಬಿಯ ಮುರಿದ ಪ್ರತಿಮೆಯನ್ನು ನೋಡುತ್ತಿದ್ದ.

ತಮ್ಮ ಮಗ ಗೊಂಬೆ ಬೀಳಿಸಿದನೆಂದು ಅಂಗಡಿಯವರು $33,600 (ಅಂದಾಜು ರೂ. 3,29,926) ಆತನಿಂದ ವಸೂಲಿ‌ ಮಾಡಿದರು. ಫೇಸ್‌ಬುಕ್ ಬಳಕೆದಾರರು ಈ ಘಟನೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಚೆಂಗ್ ಪ್ರಕಾರ ಆ ಗೊಂಬೆ ಆಕಸ್ಮಿಕವಾಗಿ ಬಿದ್ದಿದ್ದು, ಇದಕ್ಕೆ ತನ್ನ ಮಗ ಕಾರಣನಲ್ಲ ಎಂದು ಸಿಸಿ ಕ್ಯಾಮರಾ ಮೂಲಕ‌ ಕಂಡುಕೊಂಡರೂ ದಂಡ ಮೊತ್ತ ವಾಪಸ್ ಕೊಡಲು ಅಂಗಡಿಯವರು ಒಪ್ಪಲಿಲ್ಲ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...