alex Certify ಟೀ ಜತೆ ಸವಿಯಿರಿ ಬಿಸಿ ಬಿಸಿ ʼಮದ್ದೂರು ವಡೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀ ಜತೆ ಸವಿಯಿರಿ ಬಿಸಿ ಬಿಸಿ ʼಮದ್ದೂರು ವಡೆʼ

ಸಂಜೆ ಟೀ ಜತೆ ಏನಾದರೂ ತಿನ್ನಬೇಕು ಅನಿಸುವುದು ಸಹಜ. ಆದರೆ ಮಾಡುವುದು ಏನು ಎಂದು ಚಿಂತೆ ಕಾಡುತ್ತಿದೆಯಾ…? ಮನೆಯಲ್ಲಿ ಒಂದಷ್ಟು ಮೈದಾ, ಅಕ್ಕಿ ಹಿಟ್ಟು, ರವೆ ಇದ್ದರೆ ರುಚಿಕರವಾದ ಮದ್ದೂರು ವಡೆ ಮಾಡಿಕೊಂಡು ಸವಿಯಬಹುದು.

ಬೇಕಾಗುವ ಸಾಮಗ್ರಿಗಳು:

2 ಈರುಳ್ಳಿ-ಸಣ್ಣಗೆ ಹಚ್ಚಿಕೊಂಡಿದ್ದು, ½ ಕಪ್-ಮೈದಾ ಹಿಟ್ಟು, ರವೆ-6 ಟೇಬಲ್ ಸ್ಪೂನ್, ಅಕ್ಕಿ ಹಿಟ್ಟು-1/2 ಕಪ್, 2 ಹಸಿಮೆಣಸು-ಸಣ್ಣಗೆ ಹಚ್ಚಿದ್ದು, ಅರ್ಧ ಇಂಚು ಶುಂಠಿ ತುರಿದಿಟ್ಟುಕೊಂಡಿದ್ದು, ಉಪ್ಪು-ರುಚಿಗೆ ತಕ್ಕಷ್ಟು, ಬಿಳಿ ಎಳ್ಳು-2 ಟೀ ಸ್ಪೂನ್, ಗಸಗಸೆ-1 ಟೀ ಸ್ಪೂನ್, ಕರಿಬೇವು-5 ಎಸಳು ಸಣ್ಣಗೆ ಕತ್ತರಿಸಿಕೊಳ್ಳಿ, ಎಣ್ಣೆ-ಕರಿಯಲು.

ಮಾಡುವ ವಿಧಾನ:

ಮೊದಲಿಗೆ 2 ಚಮಚದಷ್ಟು ಎಣ್ಣೆ ಬಿಸಿ ಮಾಡಿಕೊಳ್ಳಿ. ನಂತರ ಒಂದು ಬೌಲ್ ಗೆ ಅಕ್ಕಿ ಹಿಟ್ಟು, ಮೈದಾ ಹಿಟ್ಟು, ರವೆ ಹಾಕಿಕೊಳ್ಳಿ. ನಂತರ ಉಪ್ಪು ಸೇರಿಸಿ. ನಂತರ ಇದಕ್ಕೆ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಉಳಿದ ಸಾಮಾಗ್ರಿಗಳೆನ್ನೆಲ್ಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ನಂತರ ಅರ್ಧ ಗಂಟೆ ಇದನ್ನು ಹಾಗೆಯೇ ಬಿಡಿ. ಈರುಳ್ಳಿ ನೀರು ಬಿಟ್ಟುಕೊಳ್ಳುತ್ತೆ. ಬೇಕಿದ್ದರೆ 1 ಟೀ ಸ್ಪೂನ್ ನೀರು ಹಾಕಿ ಎಷ್ಟು ಬೇಕೋ ಅಷ್ಟು ಹಿಟ್ಟು ಮಾತ್ರ ತೆಗೆದುಕೊಂಡು ಹಿಟ್ಟು ಕಲಸಿಕೊಳ್ಳಿ. ಒಂದು ಪ್ಲಾಸ್ಟಿಕ್ ಕವರ್ ಗೆ ಎಣ್ಣೆ ಸವರಿ ಅದರ ಮೇಲೆ ಈ ಹಿಟ್ಟು ಹಾಕಿ ತಟ್ಟಿ ಎಣ್ಣೆಯಲ್ಲಿ ಕರಿಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...