alex Certify ಜ್ವರದಿಂದ ಬಳಲುತ್ತಿರುವ ಸಮಯದಲ್ಲಿ ಈ ಗಿಡಮೂಲಿಕೆ ಔಷಧದ ಸೇವನೆ ಅಪಾಯಕಾರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜ್ವರದಿಂದ ಬಳಲುತ್ತಿರುವ ಸಮಯದಲ್ಲಿ ಈ ಗಿಡಮೂಲಿಕೆ ಔಷಧದ ಸೇವನೆ ಅಪಾಯಕಾರಿ….!

ಕೆಮ್ಮು, ನೆಗಡಿ ಬಿಟ್ಟರೆ ಚಳಿಗಾಲದಲ್ಲಿ ಕಾಡುವ ಸಮಸ್ಯೆ ಎಂದರೆ  ಜ್ವರ. ಈ ಸಮಯದಲ್ಲಿ ಸೋಂಕಿನ ಅಪಾಯ ಗಣನೀಯವಾಗಿ ಹೆಚ್ಚುತ್ತದೆ. ಜ್ವರ ವಾಸಿಯಾಗಲು ಅನೇಕರು ಅಲೋಪತಿ ಔಷಧಗಳನ್ನು ಸೇವಿಸುತ್ತಾರೆ. ಕೆಲವರು ಆಯುರ್ವೇದ ಔಷಧಿಗಳಿಗೆ ಹೆಚ್ಚಿನ ಒತ್ತು ನೀಡುತ್ತಾರೆ. ಜ್ವರ ಬಂದಾಗ ಅಶ್ವಗಂಧವನ್ನು ಸೇವಿಸಲು ಪ್ರಾರಂಭಿಸುವುದನ್ನು ನೀವು ನೋಡಿರಬಹುದು. ಈ ರೀತಿ ಮಾಡುವುದು ಅಪಾಯಕಾರಿ.

ಅಶ್ವಗಂಧ ಒಂದು ಆಯುರ್ವೇದ ಔಷಧ

ಅಶ್ವಗಂಧವನ್ನು ಸಾಮಾನ್ಯವಾಗಿ ಪುಡಿ ಅಥವಾ ಟ್ಯಾಬ್ಲೆಟ್ ರೂಪದಲ್ಲಿ ಬಳಸಲಾಗುತ್ತದೆ. ಅಶ್ವಗಂಧ ಬಳಕೆಯಿಂದ ಅನೇಕ ರೋಗಗಳನ್ನು ನಿರ್ಮೂಲನೆ ಮಾಡಬಹುದು. ಕರೋನಾ ವೈರಸ್ ಹರಡಿದಾಗ ಅನೇಕರು ಅಶ್ವಗಂಧದ ಕಷಾಯವನ್ನು ಕುಡಿಯಲು ಪ್ರಾರಂಭಿಸಿದರು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಕಾರಿ. ಜೊತೆಗೆ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಯಾವುದೇ ವೈರಸ್ ನಮ್ಮ ದೇಹವನ್ನು ಆಕ್ರಮಿಸದಂತೆ ತಡೆಯಬಲ್ಲದು.

ಜ್ವರವಿದ್ದಾಗ ಅಶ್ವಗಂಧವನ್ನು ತಿನ್ನಬೇಡಿ

ಅಶ್ವಗಂಧವು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಜ್ವರದಿಂದ ಬಳಲುತ್ತಿರುವಾಗ ಇದನ್ನು ಸೇವಿಸಬಾರದು. ಅಶ್ವಗಂಧವನ್ನು ಜೀರ್ಣಿಸಿಕೊಳ್ಳುವುದು ಸುಲಭವಲ್ಲ. ಜ್ವರವಿದ್ದಾಗ ಜೀರ್ಣಾಂಗ ವ್ಯವಸ್ಥೆಯು ಹದಗೆಟ್ಟಿರುತ್ತದೆ. ಹೊಟ್ಟೆಯ ಸಮಸ್ಯೆಗಳಾಗಿರುತ್ತವೆ. ಮಲಬದ್ಧತೆ, ಗ್ಯಾಸ್, ಅಜೀರ್ಣವೂ ಇರುತ್ತದೆ. ಹಾಗಾಗಿ ಆ ಸಮಯದಲ್ಲಿ ಅಶ್ವಗಂಧ ಸೇವನೆ ಮಾಡಿದ್ರೆ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.

ಯಕೃತ್ತಿನ ಸಮಸ್ಯೆಗಳ ಅಪಾಯ

ನಿಮ್ಮ ದೇಹವು ಅಶ್ವಗಂಧದಿಂದ ಶಕ್ತಿಯನ್ನು ಪಡೆಯುತ್ತದೆ.  ಆದರೆ ಅದರ ಅತಿಯಾದ ಬಳಕೆಯು ಹಾನಿಯನ್ನುಂಟುಮಾಡುತ್ತದೆ. ಆದ್ದರಿಂದ ಈ ಮೂಲಿಕೆಯನ್ನು ಸೇವಿಸುವ ಮೊದಲು ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ, ನೀವೇ ವೈದ್ಯರಾಗಲು ಪ್ರಯತ್ನಿಸಬೇಡಿ. ಏಕೆಂದರೆ ಇದರ ಅತಿಯಾದ ಬಳಕೆಯು ಯಕೃತ್ತಿನ ಸಮಸ್ಯೆಗಳನ್ನು ಉಂಟುಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...