alex Certify ಜೈಂಟ್ ವೀಲ್ ಆಡುವಾಗ ಚಕ್ರಕ್ಕೆ ಸಿಲುಕಿ ಚರ್ಮದ ಸಹಿತ ಕಿತ್ತು ಬಂದ ಕೂದಲು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೈಂಟ್ ವೀಲ್ ಆಡುವಾಗ ಚಕ್ರಕ್ಕೆ ಸಿಲುಕಿ ಚರ್ಮದ ಸಹಿತ ಕಿತ್ತು ಬಂದ ಕೂದಲು….!

ಹದಿನಾರು ವರ್ಷದ ಬಾಲಕಿ ಜೈಂಟ್ ವೀಲ್ ನಲ್ಲಿ ಆಡುವಾಗ ಆಕಸ್ಮಿಕವಾಗಿ ಆಕೆಯ ಕೂದಲು ಚಕ್ರಕ್ಕೆ ಸಿಲುಕಿದ್ದು, ಇದರ ಪರಿಣಾಮ ಚರ್ಮ ಸಹಿತವಾಗಿ ತಲೆಕೂದಲು ವಿಗ್ ರೀತಿಯಲ್ಲಿ ಹೊರಬಂದಿರುವ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇಂತಹದೊಂದು ದುರಂತ ನಡೆದಿದ್ದು, ಶ್ರೀರಂಗನಾಥ ಸ್ವಾಮಿ ಜಾತ್ರೆಯಲ್ಲಿ ಹಾಕಲಾಗಿದ್ದ ಜೈಂಟ್ ವೀಲ್ ನಲ್ಲಿ ಬೆಂಗಳೂರಿನ 16 ವರ್ಷದ ಶ್ರೀ ವಿದ್ಯಾ ಎಂಬ ಬಾಲಕಿ ಆಟವಾಡುತ್ತಿದ್ದಳು.

ಈ ವೇಳೆ ಆಕೆಯ ತಲೆಕೂದಲು ಆಕಸ್ಮಿಕವಾಗಿ ಚಕ್ರಕ್ಕೆ ಸಿಲುಕಿದ ಪರಿಣಾಮ ಈ ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...