alex Certify ಜುಲೈ 29 ಕ್ಕೆ ಬಿಡುಗಡೆಯಾಗಲಿದೆ ‘ಅಪರೂಪ’ ಚಿತ್ರದ ವಿಡಿಯೋ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜುಲೈ 29 ಕ್ಕೆ ಬಿಡುಗಡೆಯಾಗಲಿದೆ ‘ಅಪರೂಪ’ ಚಿತ್ರದ ವಿಡಿಯೋ ಹಾಡು

ಮಹೇಶ್ ಬಾಬು ನಿರ್ದೇಶನದ ‘ಅಪರೂಪ’ ಚಿತ್ರದ ವಿಡಿಯೋ ಹಾಡು ಇದೇ ತಿಂಗಳು ಜುಲೈ 29ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ರಿಲೀಸ್ ಆಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ.

ಇತ್ತೀಚೆಗಷ್ಟೇ ಈ ಸಿನಿಮಾದ ಲಿರಿಕಲ್ ಸಾಂಗ್ ವೊಂದನ್ನು ಬಿಡುಗಡೆ ಮಾಡಲಾಗಿತ್ತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಧ್ವನಿಯಲ್ಲಿ ಮೂಡಿಬಂದಿದ್ದ ಈ ಹಾಡು ಯೂಟ್ಯೂಬ್ ನಲ್ಲಿ ಭರ್ಜರಿ ವೀಕ್ಷಣೆ ಪಡೆದಿದೆ.

‘ಅನಿಸಿದೆ ಏಕೋ’ ಎಂಬ ಮೆಲೋಡಿ ವಿಡಿಯೋ ಹಾಡೊಂದನ್ನು ಜುಲೈ 29 ಬೆಳಿಗ್ಗೆ 10 ಗಂಟೆಗೆ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಖ್ಯಾತ ಗಾಯಕ ಅರ್ಮನ್ ಮಲ್ಲಿಕ್ ಹಾಗೂ ಸಂಗೀತ ರವೀಂದ್ರನಾಥ್ ಈ ಹಾಡಿಗೆ ಧ್ವನಿಯಾಗಿದ್ದು, ಪ್ರಜ್ವಲ್ ಪಾಯ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸುಗ್ಗಿ ಸಿನಿಮಾಸ್ ಬ್ಯಾನರ್ ನಡಿ ಕೆ.ಆರ್. ಮಹೇಶ್ ನಿರ್ಮಿಸಿರುವ ಈ ಚಿತ್ರದಲ್ಲಿ  ಸುಘೋಷ್ ಹಾಗೂ ರಿತಿಕಾ ಶ್ರೀನಿವಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...