alex Certify ಜೀವಂತ ಇದ್ದ ರೈತನ ಹೆಸರಲ್ಲಿ ಮರಣ ಪ್ರಮಾಣ ಪತ್ರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವಂತ ಇದ್ದ ರೈತನ ಹೆಸರಲ್ಲಿ ಮರಣ ಪ್ರಮಾಣ ಪತ್ರ….!

ಕೋಲಾರ: ರೈತರೊಬ್ಬರು ಪಡಿತರ ತೆಗೆದುಕೊಳ್ಳಲು ಹೋಗಿದ್ದಾಗ, ಅದರಲ್ಲಿ ಅವರ ಹೆಸರು ಕಂಡಿಲ್ಲ. ಏನೋ ದೋಷ ಆಗಿರಬಹುದು ಎಂದು ಮತ್ತೊಮ್ಮೆ ಕಚೇರಿಗಳಿಗೆ ಅಲೆದಾಡಿ ಸರಿಪಡಿಸಿದರಾಯಿತು ಎಂದು ರೈತ ಭಾವಿಸಿದ್ದರು. ಆದರೆ, ಸರಿಯಾಗಿ ಗಮನಿಸುತ್ತಿದ್ದಂತೆ ಅವರು ಸಾವನ್ನಪ್ಪಿರುವುದಾಗಿ ದಾಖಲಾಗಿರುವುದು ಕಂಡು ರೈತ ಅವಾಕ್ಕಾಗಿದ್ದಾರೆ.

ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ರೈತ, ಕಚೇರಿಗೆ ತೆರಳಿ ವಿಚಾರಿಸಿದ್ದಾರೆ. ಹಿಂದಿನ ತಹಸೀಲ್ದಾರ್ ಜಿ. ರಾಜಶೇಖರ ಸೇರಿದಂತೆ ನಾಲ್ವರು ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿಯಾಗಿದೆ ಎಂದು ತಿಳಿದು ಬಂದಿದ್ದು, ಸದ್ಯ ತಹಸೀಲ್ದಾರ್ ಸೇರಿದಂತೆ ನಾಲ್ವರು ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಅಲ್ಲದೇ, ಈ ಕುರಿತು ಎಫ್ಐಆರ್ ಕೂಡ ದಾಖಲಾಗಿದೆ. ಮುಳಬಾಗಿಲು ತಾಲೂಕಿನ ಎಂ.ಹೊಸಹಳ್ಳಿ ಎಂಬ ಗ್ರಾಮದ ಶಿವರಾಜ್(40) ಎಂಬ ರೈತರ ಹೆಸರಿನಲ್ಲಿಯೇ ಈ ರೀತಿ ಮರಣ ಪ್ರಮಾಣ ಪತ್ರವನ್ನು ಅಧಿಕಾರಿಗಳು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...