alex Certify ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್: ಡಿಸ್ನಿ + ಹಾಟ್‌ಸ್ಟಾರ್ ಹೊಸ ಪ್ಲಾನ್ ಲಾಂಚ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್: ಡಿಸ್ನಿ + ಹಾಟ್‌ಸ್ಟಾರ್ ಹೊಸ ಪ್ಲಾನ್ ಲಾಂಚ್

ಪ್ರತಿ ಬಾರಿ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವ ರಿಲಯನ್ಸ್ ಮಾಲೀಕತ್ವದ ಜಿಯೋ ಟೆಲಿಕಾಂ ಈ ಬಾರಿ ತನ್ನ ಹೊಸ ರೀಚಾರ್ಜ್ ಪ್ಲಾನ್‌ನೊಂದಿಗೆ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ವಾರ್ಷಿಕ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಿದೆ.

ಹೊಸ ರಿಚಾರ್ಜ್ ಪ್ಲಾನ್ ನಲ್ಲಿ ಜಿಯೋ ಡಿಸ್ನಿ + ಹಾಟ್‌ಸ್ಟಾರ್ ಒಂದು ವರ್ಷ ಉಚಿತ. ಅಂದರೆ ರೂ. Rs 499 ತಿಂಗಳ ರೀಚಾರ್ಜ್ ಪ್ಲಾನ್ ಗ್ರಾಹಕರಿಗೆ ಒಂದು ತಿಂಗಳ ಚಂದಾದಾರಿಕೆಯೊಂದಿಗೆ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ವಾರ್ಷಿಕ ಚಂದಾದಾರಿಕೆ (ಆನುಯಲ್ ಸಬ್‌ಸ್ಕ್ರಿಪ್ಷನ್) ಉಚಿತವಾಗಿ ಸಿಗಲಿದೆ.

ಈ ಪ್ಲಾನ್‌ ನಲ್ಲಿ ಜಿಯೋ ಗ್ರಾಹಕರಿಗೆ ಪ್ರತಿ ನಿತ್ಯ ಅತೀ ವೇಗದ 2GB ಡೇಟಾ ದೊರೆಯಲಿದ್ದು, ಅನಿಮಿಯತವಾಗಿ ವಾಯ್ಸ್ ಕರೆಗಳನ್ನು ಮಾಡಬಹುದಾಗಿದೆ.

ಇದಲ್ಲದೆ ಪ್ರತಿ ನಿತ್ಯ 100 ಉಚಿತ ಮೇಸೆಜ್ ಗಳನ್ನು ಕಳುಹಿಸಬಹುದಾಗಿದೆ. ಎಲ್ಲಾ ಜಿಯೋ ಆಪ್‌ ಗಳನ್ನು ಉಚಿತವಾಗಿ ಬಳಸಬಹುದು. ಇದಲ್ಲದೆ ಹೊಸದಾಗಿ ಜಿಯೋ ಸಿಮ್ ಖರೀದಿಸುವವರು ಈ ಪ್ಲಾನ್ ಅನ್ನು ರೀಚಾರ್ಜ್ ಮಾಡಿಸಿಕೊಂಡಲ್ಲಿ ಜಿಯೋ ಪ್ರೈಮ್ ಗಾಗಿ ನೀಡಬೇಕಾಗಿದ್ದ 99 ರೂ.ಗಳನ್ನು ಪಾವತಿಸುವ ಅಗತ್ಯವಿಲ್ಲ. ಈ ರೀಚಾರ್ಜ್ ನೊಂದಿಗೆ ಹೊಸ ಬಳಕೆದಾರರಿಗೆ ಜಿಯೋ ಪ್ರೈಮ್ ಸದಸ್ಯತ್ವ ಉಚಿತವಾಗಿ ದೊರೆಯಲಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...