alex Certify ಜಿಂಕೆಗಳ ಹಿಂಡಿನ ಮೇಲೆ ಮೊಸಳೆ ಅಟ್ಯಾಕ್: ಮುಂದೇನಾಯ್ತು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಂಕೆಗಳ ಹಿಂಡಿನ ಮೇಲೆ ಮೊಸಳೆ ಅಟ್ಯಾಕ್: ಮುಂದೇನಾಯ್ತು ಗೊತ್ತಾ..?

Viral Video: Crocodile Sneaks Up on Deers Drinking Water, What Happened Next | Watchಪ್ರಾಣಿ ಸಾಮ್ರಾಜ್ಯವು ಬಹಳ ಆಸಕ್ತಿದಾಯಕ ವಿಷಯವಾಗಿದೆ. ಈ ಅದ್ಭುತ ಜೀವಿಗಳ ತಮಾಷೆಯ, ಬೇಟೆಯಾಡುವ ಮುಂತಾದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ವೈರಲ್ ಆಗುತ್ತವೆ. ಇದೀಗ ಮೊಸಳೆಯೊಂದು ಜಿಂಕೆ ಮೇಲೆ ದಾಳಿ ಮಾಡುವ ಭಯಾನಕ ವಿಡಿಯೋವೊಂದು ಹೊರಬಿದ್ದಿದೆ.

ಮೊಸಳೆಯನ್ನು ನೀರಿನಲ್ಲಿ ಅತ್ಯಂತ ಅಪಾಯಕಾರಿ ಜೀವಿ ಎಂದೇ ಕರೆಯಲಾಗುತ್ತದೆ. ನದಿಯ ದಡದಲ್ಲಿ ಜಿಂಕೆಗಳ ಗುಂಪು ನೀರು ಕುಡಿಯುತ್ತಿರುತ್ತದೆ. ಈ ವೇಳೆ ಇದ್ದಕ್ಕಿದ್ದಂತೆ ಮೊಸಳೆಯು ನೀರಿನೊಳಗಿನಿಂದ ಹೊರಬಂದು ಅವುಗಳ ಮೇಲೆ ದಾಳಿ ಮಾಡುತ್ತದೆ. ಅಲ್ಲಿದ್ದ ಜಿಂಕೆಗಳೆಲ್ಲಾ ಭಯದಿಂದ ಓಡಿಹೋದರೆ, ಅವುಗಳಲ್ಲಿ ಒಂದು ಜಿಂಕೆಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಷ್ಟರಲ್ಲಿ ಮೊಸಳೆಯು ಜಿಂಕೆಯ ಬಾಲವನ್ನು ಹಿಡಿದು ನೀರಿನೊಳಗೆ ಎಳೆದೊಯ್ಯುತ್ತದೆ.

ವರ್ಲ್ಡ್ ನೇಚರ್ ಫಾರ್ ಯು ಎಂಬ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಜಿಂಕೆ ಮತ್ತು ಮೊಸಳೆಯ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋ ತ್ವರಿತವಾಗಿ ನೆಟ್ಟಿಗರ ಗಮನ ಸೆಳೆದಿದ್ದು, ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಮೊಸಳೆ, ಜಿಂಕೆಯನ್ನು ಹಿಡಿದಿದ್ದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...