alex Certify ಪೌಡರ್‌ ಬಳಸಿದ್ದರಿಂದ ಕ್ಯಾನ್ಸರ್‌; ಸಂತ್ರಸ್ಥನಿಗೆ 150 ಕೋಟಿ ರೂ. ಪರಿಹಾರ ಕೊಡಬೇಕಿದೆ ಕಂಪನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೌಡರ್‌ ಬಳಸಿದ್ದರಿಂದ ಕ್ಯಾನ್ಸರ್‌; ಸಂತ್ರಸ್ಥನಿಗೆ 150 ಕೋಟಿ ರೂ. ಪರಿಹಾರ ಕೊಡಬೇಕಿದೆ ಕಂಪನಿ…!

ಜಾನ್ಸನ್ & ಜಾನ್ಸನ್‌ ಕಂಪನಿಯ ಉತ್ಪನ್ನಗಳಲ್ಲಿ ಹಾನಿಕಾರಕ ಅಂಶಗಳು ಈ ಹಿಂದೆಯೇ ಪತ್ತೆಯಾಗಿದ್ದವು. ಈ ಕಂಪನಿಯ ಪೌಡರ್‌ ಬಳಸಿದ್ದರಿಂದ ತನಗೆ ಕ್ಯಾನ್ಸರ್‌ ಬಂದಿದೆ ಎಂದು ಕ್ಯಾಲಿಫೋರ್ನಿಯಾದ ವ್ಯಕ್ತಿಯೊಬ್ಬರು ಪ್ರಕರಣ ದಾಖಲಿಸಿದ್ದರು.

ಇದೀಗ ಆ ವ್ಯಕ್ತಿಗೆ ‘ಜಾನ್ಸನ್ ಅಂಡ್ ಜಾನ್ಸನ್’ ಕಂಪನಿ 154 ಕೋಟಿ 37 ಲಕ್ಷದ 15 ಸಾವಿರ ರೂಪಾಯಿ ಪಾವತಿಸಬೇಕಾಗಿದೆ. ಅಮೆರಿಕದ ನ್ಯಾಯಾಲಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದೆ. ಕಂಪನಿಯು ಆದಷ್ಟು ಬೇಗ ಸಂತ್ರಸ್ಥ ವ್ಯಕ್ತಿಗೆ ಅಷ್ಟು ಹಣವನ್ನು ನೀಡಬೇಕೆಂದು ಆದೇಶಿಸಿದೆ.

ಜಾನ್ಸನ್‌ & ಜಾನ್ಸನ್‌ ಕಂಪನಿಯ ಮೇಲೆ ಇಂತಹ ಅನೇಕ ಪ್ರಕರಣಗಳಿವೆ. ಪ್ರಕರಣ ದಾಖಲಿಸಿರುವ ಕ್ಯಾಲಿಫೋರ್ನಿಯಾದ ವ್ಯಕ್ತಿ ಹೆರ್ನಾಂಡೆಜ್, ಕ್ಯಾನ್ಸರ್‌ನಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅನಾರೋಗ್ಯವು ಅವರಿಗೆ ದುಬಾರಿಯಾಗಿ ಪರಿಣಮಿಸಿರೋದನ್ನು ನ್ಯಾಯಾಲಯ ಕೂಡ ಗಮನಿಸಿದೆ.

ಆದರೆ ಕೋರ್ಟ್‌ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಜಾನ್ಸನ್‌ & ಜಾನ್ಸನ್‌ ಕಂಪನಿ ನಿರ್ಧರಿಸಿದೆ. ಕಂಪನಿಯ ಬೇಬಿ ಪೌಡರ್ ಸುರಕ್ಷಿತವಾಗಿದೆ, ಅದರಲ್ಲಿ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಯಾವುದೇ ಅಂಶಗಳಿಲ್ಲ ಎಂದು ಸಮರ್ಥಿಸಿಕೊಂಡಿದೆ.

ಹರ್ನಾಂಡೆಜ್‌ ಮಗುವಾಗಿದ್ದಾಗ ಹೆಚ್ಚಿನ ಪ್ರಮಾಣದಲ್ಲಿ ಜಾನ್ಸನ್‌ & ಜಾನ್ಸನ್‌ ಕಂಪನಿಯ ಬೇಬಿ ಪೌಡರ್ ಅನ್ನು ಬಳಸುತ್ತಿದ್ದರಂತೆ. J&J ನ ಬೇಬಿ ಪೌಡರ್ ಮತ್ತು ಇತರ ಟಾಲ್ಕ್ ಉತ್ಪನ್ನಗಳು ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿವೆ. ಇದು ಅಂಡಾಶಯದ ಕ್ಯಾನ್ಸರ್ ಮತ್ತು ಮೆಸೊಥೆಲಿಯೊಮಾವನ್ನು ಉಂಟುಮಾಡುತ್ತವೆ ಎಂದು ಆರೋಪಿಸಿ ಹಲವಾರು ಜನರು ಮೊಕದ್ದಮೆಗಳನ್ನು ಹೂಡಿದ್ದಾರೆ.

ಈಗಾಗ್ಲೇ ಕಂಪನಿ ವಿರುದ್ಧ 38,000 ಕ್ಕೂ ಹೆಚ್ಚು ಪ್ರಕರಣಗಳಿವೆ. ಕಂಪನಿ ದಿವಾಳಿಯಾಗಿರೋದಾಗಿ ಈಗಾಗ್ಲೇ ಹೇಳಿಕೊಂಡಿದೆ. ಈ ಮಧ್ಯೆ ದೂರುದಾರ ಹರ್ನಾಂಡೆಜ್‌ ಇನ್ನು ಕೆಲವೇ ದಿನಗಳ ಕಾಲ ಬದುಕುಳಿಯುವ ಸಾಧ್ಯತೆ ಇರುವುದರಿಂದ ಕೋರ್ಟ್‌ ಆತನ ಪ್ರಕರಣವನ್ನು ಇತ್ಯರ್ಥಗೊಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...