alex Certify ಜಡೆ ಹಿಡಿದುಕೊಂಡ ವಿದ್ಯಾರ್ಥಿನಿಯರ ಜಟಾಪಟಿ; ವೈರಲ್‌ ಆಗಿದೆ ಕಿತ್ತಾಟದ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಡೆ ಹಿಡಿದುಕೊಂಡ ವಿದ್ಯಾರ್ಥಿನಿಯರ ಜಟಾಪಟಿ; ವೈರಲ್‌ ಆಗಿದೆ ಕಿತ್ತಾಟದ ವಿಡಿಯೋ…!

ಪ್ರತಿ ದಿನ ನಮ್ಮನ್ನು ರಂಜಿಸುವಂತಹ, ತಮಾಷೆಯ ಹಾಗೂ ಕೆಲವೊಂದು ವಿಲಕ್ಷಣ ವಿಡಿಯೋಗಳು ಇಂಟರ್ನೆಟ್‌ನಲ್ಲಿ ವೈರಲ್‌ ಆಗುತ್ತವೆ. ಇದೀಗ ಕಾನ್ಪುರದ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ನಡುವೆ ನಡೆದ ಜಟಾಪಟಿಯ ವಿಡಿಯೋ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ.

ಮೂವರು ಬಾಲಕಿಯರ ನಡುವೆ ತರಗತಿಯಲ್ಲೇ ಈ ಕ್ರೇಜಿ ಫೈಟ್‌ ನಡೆದಿದೆ. ಶಾಲಾ ಸಮವಸ್ತ್ರವನ್ನು ಧರಿಸಿರುವ 3 ವಿದ್ಯಾರ್ಥಿನಿಯರು ಪರಸ್ಪರ ಕೂದಲನ್ನು ಎಳೆದಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಥಳಿಸಿದ್ದಾರೆ.

ಕ್ಲಾಸ್‌ನಲ್ಲಿದ್ದ ಇತರ ವಿದ್ಯಾರ್ಥಿನಿಯರು ಜಗಳ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಕೆಲವರು ಮಧ್ಯಪ್ರವೇಶಿಸಿ ಜಟಾಪಟಿಗಿಳಿದಿದ್ದವರನ್ನು ದೂರ ಸರಿಸಲು ಸಹ ಯತ್ನಿಸಿದ್ದಾರೆ.

ಆದರೆ ವಿದ್ಯಾರ್ಥಿನಿಯರ ಕಿತ್ತಾಟವನ್ನು ತಡೆಯಲು ಸಾಧ್ಯವಾಗಲಿಲ್ಲ. ಈ ವಿಡಿಯೋವನ್ನು ಪತ್ರಕರ್ತ ಅಮಿತ್ ಸಿಂಗ್ ಶೇರ್‌ ಮಾಡಿದ್ದಾರೆ. ಕಾನ್ಪುರದ ಪ್ರತಿಷ್ಠಿತ ಖಾಸಗಿ ಶಾಲೆಯ ವಿದ್ಯಾರ್ಥಿನಿಯರು ಅಂತಾ ಬರೆದುಕೊಂಡಿದ್ದಾರೆ. ಈಗಾಗಲೇ ಸುಮಾರು 90 ಸಾವಿರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ಕಾದಾಟದ ಹಿಂದಿನ ಕಾರಣ ಮಾತ್ರ ಬಹಿರಂಗವಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...