ದಿನದ 24 ಗಂಟೆಗಳಲ್ಲಿ 12 ಗಂಟೆಗಳು ಹಗಲು, ಉಳಿದ 12 ಗಂಟೆಗಳು ರಾತ್ರಿ ಅನ್ನೋದು ನಮಗೆ ಗೊತ್ತಿರೋ ಸಂಗತಿ. ಆದರೆ ಕೆಲವು ರಾಷ್ಟ್ರಗಳಲ್ಲಿ ರಾತ್ರಿ ಅನ್ನೋದೇ ಇಲ್ಲ. ಸೂರ್ಯ ಇಲ್ಲಿ ಮುಳುಗುವುದೇ ಇಲ್ಲ. ಸೂರ್ಯ ಎಂದಿಗೂ ಅಸ್ತಮಿಸದಿದ್ದರೆ ಹೇಗಿರಬಹುದು ಅನ್ನೋದು ನಮ್ಮ ಕಲ್ಪನೆಗೂ ನಿಲುಕದ ಸಂಗತಿ. ಈ ಜಗತ್ತಿನಲ್ಲಿ ಸೂರ್ಯ ಮುಳುಗದ ಅನೇಕ ದೇಶಗಳಿವೆ. ಆ ದೇಶಗಳಲ್ಲಿ ಹಗಲು ಮತ್ತು ರಾತ್ರಿಯನ್ನು ತಿಳಿದುಕೊಳ್ಳೋದು ಹೇಗೆ ? ಯಾವಾಗ ಏಳಬೇಕು ಮತ್ತು ಯಾವಾಗ ಮಲಗಬೇಕು ಅನ್ನೋ ಕುತೂಹಲ ಸಹಜ.
ನಾರ್ವೆ: ನಾರ್ವೆಯನ್ನು ಲ್ಯಾಂಡ್ ಆಫ್ ಮಿಡ್‌ನೈಟ್ ಸನ್ ಎಂದು ಕರೆಯಲಾಗುತ್ತದೆ. ಮೇ ಅಂತ್ಯದಿಂದ ಜುಲೈ ಅಂತ್ಯದವರೆಗೆ ಸುಮಾರು 76 ದಿನಗಳವರೆಗೆ ಇಲ್ಲಿ ಸೂರ್ಯನು ಅಸ್ತಮಿಸುವುದಿಲ್ಲ. ದಿನದ ಸುಮಾರು 20 ಗಂಟೆಗಳ ಕಾಲ ಬಲವಾದ ಸೂರ್ಯನ ಬೆಳಕು ಇರುತ್ತದೆ.
ನಾರ್ವೆಯ ಸ್ವಾಲ್ಬಾರ್ಡ್‌ನಲ್ಲಿ, ಏಪ್ರಿಲ್ 10 ರಿಂದ ಆಗಸ್ಟ್ 23 ರವರೆಗೆ ಸೂರ್ಯನು ನಿರಂತರವಾಗಿ ಬೆಳಗುತ್ತಾನೆ. ಇಲ್ಲಿ ಕೇವಲ 40 ನಿಮಿಷ ಮಾತ್ರ ರಾತ್ರಿ, ಉಳಿದ ಸಮಯದಲ್ಲಿ ಸೂರ್ಯನ ಬೆಳಕು ಇರುತ್ತದೆ. ಇಲ್ಲಿ ಸೂರ್ಯ 12:43ಕ್ಕೆ ಅಸ್ತಮಿಸುತ್ತಾನೆ ಮತ್ತು ಕೇವಲ 40 ನಿಮಿಷಗಳ ನಂತರ ಉದಯಿಸುತ್ತಾನೆ. ಇಲ್ಲಿ ತಡರಾತ್ರಿ 1:30 ಆದ ಕೂಡಲೇ ಬೆಳಗಿನ ಜಾವ ಆಗುತ್ತದೆ. ನಾರ್ವೆಯಲ್ಲಿ 100 ವರ್ಷಗಳಿಂದ ಸೂರ್ಯನ ಬೆಳಕು ತಲುಪದ ಸ್ಥಳವಿದೆ ಅನ್ನೋದು ಮತ್ತೊಂದು ವಿಶೇಷ.
ಐಸ್‌ಲ್ಯಾಂಡ್: ಗ್ರೇಟ್ ಬ್ರಿಟನ್ ನಂತರ ಐಸ್‌ಲ್ಯಾಂಡ್ ಯುರೋಪ್‌ನ ಅತಿದೊಡ್ಡ ದ್ವೀಪ. ಜೂನ್‌ನಲ್ಲಿ ಸೂರ್ಯ ಇಲ್ಲಿ ಎಂದಿಗೂ ಅಸ್ತಮಿಸುವುದಿಲ್ಲ, ದಿನದ 24 ಗಂಟೆಗಳ ಕಾಲ ಉರಿಯುತ್ತಲೇ ಇರುತ್ತಾನೆ.
ಕೆನಡಾ: ಇದು ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿದೆ. ಕೆನಡಾದ ನುನಾವುತ್ ನಗರದಲ್ಲಿ ಸೂರ್ಯ 2 ತಿಂಗಳವರೆಗೆ ಅಸ್ತಮಿಸುವುದಿಲ್ಲ. ಇಲ್ಲಿನ ವಾಯುವ್ಯ ಮುಂತಾದ ಕಡೆ ಬೇಸಿಗೆಯಲ್ಲಿ ಸುಮಾರು 50 ದಿನಗಳ ಕಾಲ ಬಿಸಿಲು ಬೀಳುತ್ತದೆ ಎಂದು ಹೇಳಲಾಗುತ್ತದೆ.
ಸ್ವೀಡನ್: ಸ್ವೀಡನ್ ಕೂಡ ಬಹಳ ಸುಂದರವಾದ ದೇಶ. ಮೇ ತಿಂಗಳ ಆರಂಭದಿಂದ ಆಗಸ್ಟ್ ಅಂತ್ಯದವರೆಗೆ ಇಲ್ಲಿ ಸೂರ್ಯ ಬೆಳಗುತ್ತಲೇ ಇರುತ್ತಾನೆ. ರಾತ್ರಿ 12ಕ್ಕೆ ಸೂರ್ಯಾಸ್ತವಾದ್ರೆ ಬೆಳಗ್ಗೆ 4:30 ಕ್ಕೆ ಮತ್ತೆ ಸೂರ್ಯೋದಯವಾಗುತ್ತದೆ.
ಅಲಾಸ್ಕಾ: ಮೇ ಅಂತ್ಯದಿಂದ ಜುಲೈ ಅಂತ್ಯದವರೆಗೆ ಸೂರ್ಯ ಮುಳುಗದ ದೇಶಗಳಲ್ಲಿ ಅಲಾಸ್ಕಾ ಕೂಡ ಒಂದು. ಇದರ ನಂತರ ಚಳಿಗಾಲದಲ್ಲಿ ಅಂದರೆ ನವೆಂಬರ್ ಆರಂಭದಲ್ಲಿ, 1 ತಿಂಗಳು ರಾತ್ರಿ ಇರುತ್ತದೆ. ಈ ಸಮಯವನ್ನು ಪೋಲಾರ್ ನೈಟ್ಸ್ ಎಂದು ಕರೆಯಲಾಗುತ್ತದೆ.
ಫಿನ್‌ಲ್ಯಾಂಡ್: ಇದನ್ನು ಸರೋವರಗಳು ಮತ್ತು ದ್ವೀಪಗಳ ಭೂಮಿ ಎಂದು ಕರೆಯಲಾಗುತ್ತದೆ. ಇಲ್ಲಿನ ಬಹುತೇಕ ಭಾಗಗಳು ಬೇಸಿಗೆಯಲ್ಲಿ ಕೇವಲ 73 ದಿನಗಳ ಕಾಲ ಸೂರ್ಯನನ್ನು ನೇರವಾಗಿ ನೋಡುತ್ತವೆ. ಈ ಸಮಯದಲ್ಲಿ ಸೂರ್ಯನು ಸುಮಾರು 73 ದಿನಗಳವರೆಗೆ ಬೆಳಗುತ್ತಾನೆ, ಆದರೆ ಚಳಿಗಾಲದಲ್ಲಿ ಸೂರ್ಯನು ಗೋಚರಿಸುವುದಿಲ್ಲ.