alex Certify 24 ಗಂಟೆಗಳೂ ಬದುಕುವುದಿಲ್ಲವೆಂದಿದ್ದವನಿಗೀಗ 44 ವರ್ಷ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

24 ಗಂಟೆಗಳೂ ಬದುಕುವುದಿಲ್ಲವೆಂದಿದ್ದವನಿಗೀಗ 44 ವರ್ಷ…!

ವಿಚಿತ್ರವಾಗಿ ಜನಿಸಿದ ಮಗು 24 ತಾಸು ಸಹ ಬದುಕುವುದಿಲ್ಲ‌ ಎಂದು ವೈದ್ಯರು ಭವಿಷ್ಯ ನುಡಿದಿದ್ದರು, ಆದರೆ‌ ಆ ಭವಿಷ್ಯ ಸುಳ್ಳಾಗಿದ್ದು ಆತನಿಗೀಗ 44ರ ಹರೆಯ.

ಈಶಾನ್ಯ ಬ್ರೆಜಿಲಿಯನ್‌ನ ಬಹಿಯಾದಲ್ಲಿ ವಾಸಿಸುವ ಕ್ಲಾಡಿಯೊ ವಿಯೆರಾ ಡಿ ಒಲಿವೆರಾ ಎಂಬಾತ ಹುಟ್ಟಿದಾಗಿನಿಂದಲೂ ಆರ್ತ್ರೋ ಗ್ರೈಫೋಸಿಸ್ ಮಲ್ಟಿಪ್ಲೆಕ್ಸ್ ಎಂಬ ಖಾಯಿಲೆಯಿಂದ ಬಳಲುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ನೈಟ್ ಕರ್ಫ್ಯೂ ಜಾರಿ: ರಾಜ್ಯದಲ್ಲಿಯೂ ಆತಂಕ

ಆತನ ಸ್ಥಿತಿಯೇ ವಿಚಿತ್ರ. ತಲೆ ಕುತ್ತಿಗೆ ಮೇಲಿಲ್ಲ.‌ ಸಂಪೂರ್ಣ ಹಿಂದಕ್ಕೆ ಬಾಗಿದ್ದು ಬೆನ್ನಿಗೆ ಒರಗಿ ಆಶ್ರಯ ಪಡೆದಂತಿದೆ. ಅವನ ತೋಳುಗಳು ಎದೆಗೆ ಅಂಟಿಕೊಂಡಿವೆ, ಕಾಲು ಕೂಡ ಸಹಜ ಸ್ಥಿತಿಯಲ್ಲಿಲ್ಲ.

ತನ್ನ ಪರಿಸ್ಥಿತಿ ಹೀಗಾಯಿತೆಂದು ಆತ ಬೇಸರಿಸಿಕೊಂಡು ಕೂರಲಿಲ್ಲ. ಜೀವನವನ್ನು ಪ್ರೀತಿಸಿ, ತಾಯಿಯಿಂದಲೇ ಓದು ಬರಹ ಕಲಿತನು. ವಿಚಿತ್ರ ಪರಿಸ್ಥಿಯಲ್ಲಿದ್ದರೂ ಉಸಿರಾಟ, ಆಹಾರ ಸೇವನೆಗೆ ಸಮಸ್ಯೆಯಾಗಿಲ್ಲವಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...