alex Certify ಜಗತ್ತಿನ ಅತ್ಯಂತ ಅಪಾಯಕಾರಿ ಮಹಿಳಾ ಸ್ಪೈ…..! 50 ಸಾವಿರ ಸೈನಿಕರನ್ನು ಕೊಂದಳಾ ಈಕೆ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ ಅತ್ಯಂತ ಅಪಾಯಕಾರಿ ಮಹಿಳಾ ಸ್ಪೈ…..! 50 ಸಾವಿರ ಸೈನಿಕರನ್ನು ಕೊಂದಳಾ ಈಕೆ…..?

ಎರಡು ದೇಶಗಳ ಸೇನೆಗಳ ಮಧ್ಯೆ ಮಾತ್ರ ಯುದ್ಧ ನಡೆಯುವುದಿಲ್ಲ, ಸಾಮಾನ್ಯ ಜನರಿಗೆ ಗೊತ್ತಿಲ್ಲದ ಸಮರ ಅಲ್ಲಿ ನಡೆಯುತ್ತದೆ. ಈ ಯುದ್ಧ ಇರುವುದು ಬೇಹುಗಾರಿಕೆ ಕ್ಷೇತ್ರದಲ್ಲಿ. ಇಲ್ಲಿ ಗುಪ್ತಚರ ಮಾಹಿತಿಯೇ ದೊಡ್ಡ ಅಸ್ತ್ರ. ಬೇಹುಗಾರಿಕೆ ಜಗತ್ತಿನಲ್ಲಿ ಆಶ್ಚರ್ಯಕರ ಸಾಧನೆಗಳನ್ನು ಮಾಡಿದ ಕೆಲವು ಹೆಸರುಗಳಿವೆ. ಪುರುಷರು ಮಾತ್ರವಲ್ಲ ಮಹಿಳಾ ಗೂಢಚಾರರೂ ಈ ಪಟ್ಟಿಯಲ್ಲಿದ್ದಾರೆ. ಮಾತಾ ಹರಿ ಎಂಬ ಹೆಸರಿನಿಂದಲೇ ಫೇಮಸ್‌ ಆಗಿದ್ದ ಮಹಿಳಾ ಪತ್ತೇದಾರಿಯ ಬದುಕಿನ ಘಟನೆಗಳು ನಿಜಕ್ಕೂ ಅಚ್ಚರಿ ಮೂಡಿಸುವಂತಿವೆ.

ನಗ್ನ ನೃತ್ಯವನ್ನು ಜನಪ್ರಿಯಗೊಳಿಸಿದ ಕೀರ್ತಿಯೂ ಮಾತಾ ಹರಿಗೆ ಸಲ್ಲುತ್ತದೆ. ಆಕೆಗೆ ಅಭಿಮಾನಿಗಳ ಕೊರತೆ ಇರಲಿಲ್ಲ. ಮಿಲಿಟರಿ ಜನರಲ್‌ಗಳು, ಉದ್ಯಮಿಗಳು ಮತ್ತು ಅನೇಕ ದೇಶಗಳ ಮಂತ್ರಿಗಳು ಆಕೆಯ ಫ್ಯಾನ್‌ ಆಗಿಬಿಟ್ಟಿದ್ದರು. ಮಾತಾ ಹರಿಯ ನಿಜವಾದ ಹೆಸರು ಮಾರ್ಗರಿಟಾ ಗೀರ್ಟ್ರುಡಾ. ಆಕೆ 1876 ರಲ್ಲಿ ನೆದರ್‌ಲ್ಯಾಂಡ್‌ನಲ್ಲಿ ಜನಿಸಿದ್ದಳು. ಡಚ್ ಮಿಲಿಟರಿ ಅಧಿಕಾರಿಯನ್ನು ವಿವಾಹವಾಗಿದ್ದಳು. ಆದರೆ 1902 ರಲ್ಲಿ ದಂಪತಿ ದೂರವಾದರು. ಈಕೆ ಅದ್ಭುತ ಡಾನ್ಸರ್‌. ಯುರೋಪ್‌ನ ಅತ್ಯಂತ ಪ್ರಸಿದ್ಧ ನೃತ್ಯಗಾತಿಯರಲ್ಲಿ ಒಬ್ಬಳು.

ಮೊದಲನೆಯ ಮಹಾಯುದ್ಧದ ಪತ್ತೇದಾರಿ!

ಮೊದಲ ಮಹಾಯುದ್ಧದಲ್ಲಿ ಫ್ರೆಂಚ್ ಗುಪ್ತಚರ ಸಂಸ್ಥೆಗಳ ಕಣ್ಣು ಮಾತಾ ಹರಿ ಮೇಲೆ ಬಿದ್ದಿತು. ಹಣಕ್ಕೆ ಪ್ರತಿಯಾಗಿ ಜರ್ಮನ್ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುವ ಕೆಲಸವನ್ನು ಆಕೆಗೆ ವಹಿಸಲಾಯಿತು. ಆದರೆ ಡಬಲ್ ಏಜೆಂಟ್ ಆದ ಮಾತಾ, ಜರ್ಮನಿಗೂ ಬೇಹುಗಾರಿಕೆಯನ್ನು ಪ್ರಾರಂಭಿಸಿದಳು. ಆಕೆಯ  ನೃತ್ಯ ಅಧಿಕಾರಿಗಳಿಂದ ರಹಸ್ಯ ಬಾಯ್ಬಿಡಿಸಲು ಸಹಾಯ ಮಾಡಿತು. ಮಾತಾ ಹರಿ ಎರಡೂ ದೇಶಗಳ ಬೇಹುಗಾರಿಕೆ ಮಾಡ್ತಿರೋದು ಹೆಚ್ಚು ಕಾಲ ರಹಸ್ಯವಾಗಿ ಉಳಿಯಲಿಲ್ಲ. ಆಕೆ ಡಬಲ್‌ ಏಜೆಂಟ್‌ ಅನ್ನೋದು ಉಭಯ ರಾಷ್ಟ್ರಗಳಿಗೆ ಗೊತ್ತಾಗಿಬಿಟ್ಟಿತ್ತು.

ಫ್ರೆಂಚ್ ಗುಪ್ತಚರ ಸಂಸ್ಥೆ ಆಕೆಯ ವಿರುದ್ಧ ಪುರಾವೆಗಳನ್ನು ಸಂಗ್ರಹಿಸಿ,  ಬಂಧಿಸಿತು. ಮಾತಾ ಹರಿ ಮಾಹಿತಿ ಸೋರಿಕೆ ಮಾಡಿದ್ದರಿಂದ ಜರ್ಮನಿ ಫ್ರಾನ್ಸ್ ಮೇಲೆ ನಡೆಸಿದ ದಾಳಿಯಲ್ಲಿ 50 ಸಾವಿರ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತದೆ. ದೇಶದ್ರೋಹದ ಅಪರಾಧಕ್ಕಾಗಿ ಮಾತಾ ಹರಿಗೆ ಮರಣದಂಡನೆ ವಿಧಿಸಲಾಯಿತು. 41 ನೇ ವಯಸ್ಸಿನಲ್ಲಿ, 1917ರ ಅಕ್ಟೋಬರ್‌ನಲ್ಲಿ ಆಕೆಯನ್ನು ಗುಂಡಿಕ್ಕಿ ಕೊಲ್ಲಲಾಯ್ತು. ಮಾತಾ ಹರಿಯ ಮೃತದೇಹವನ್ನು ತೆಗೆದುಕೊಂಡು ಹೋಗಲು ಯಾರೂ ಬರಲಿಲ್ಲ. ಶವವನ್ನು ಪ್ರಯೋಗಕ್ಕಾಗಿ ಪ್ಯಾರಿಸ್ ವೈದ್ಯಕೀಯ ಶಾಲೆಗೆ ಕಳುಹಿಸಲಾಯ್ತು. ಮುಖವನ್ನು ಅನ್ಯಾಟಮಿ ಮ್ಯೂಸಿಯಂನಲ್ಲಿ ಸಂಗ್ರಹಿಸಲಾಗಿತ್ತು, ಆದರೆ ಅದು 26 ವರ್ಷಗಳ ಹಿಂದೆ ಅಲ್ಲಿಂದ ಕಣ್ಮರೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...