alex Certify ಜಗತ್ತನ್ನೇ ಆವರಿಸಿಕೊಳ್ತಿದೆ ಆರ್ಥಿಕ ಹಿಂಜರಿತ ಮತ್ತು ಉದ್ಯೋಗ ಕಡಿತ, ನಿಮ್ಮ ಬಜೆಟ್‌ ಪ್ಲಾನಿಂಗ್‌ ಹೇಗಿರಬೇಕು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತನ್ನೇ ಆವರಿಸಿಕೊಳ್ತಿದೆ ಆರ್ಥಿಕ ಹಿಂಜರಿತ ಮತ್ತು ಉದ್ಯೋಗ ಕಡಿತ, ನಿಮ್ಮ ಬಜೆಟ್‌ ಪ್ಲಾನಿಂಗ್‌ ಹೇಗಿರಬೇಕು ಗೊತ್ತಾ….?  

ಬಹುತೇಕ ಎಲ್ಲಾ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಂಪನಿಗಳು ಸಿಬ್ಬಂದಿ ಕಡಿತ ಶುರು ಮಾಡಿವೆ. ಎಲೋನ್ ಮಸ್ಕ್ ಟ್ವಿಟರ್ ಸಾರಥ್ಯ ವಹಿಸಿಕೊಳ್ತಿದ್ದಂತೆ ಕಂಪನಿಯ ಅರ್ಧದಷ್ಟು ಸಿಬ್ಬಂದಿಯನ್ನು ವಜಾ ಮಾಡಿದ್ದಾರೆ. ಇದರ ಬೆನ್ನಲ್ಲೇ ಮೆಟಾ ಮತ್ತು ಅಮೆಜಾನ್‌ನಂತಹ ದೊಡ್ಡ ಸಂಸ್ಥೆಗಳು ಕೂಡ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿವೆ. ಹಾಗಾಗಿ ಆರ್ಥಿಕ ಹಿಂಜರಿತ ಮತ್ತು ಉದ್ಯೋಗ ಕಡಿತದ ಭೀತಿ ಎಲ್ಲರಲ್ಲೂ ಆವರಿಸಿದೆ. ಈ ಸನ್ನಿವೇಶ ಎದುರಾದಾಗ ದಿಗಿಲುಗೊಳ್ಳುವ ಬದಲು ಈ ಬಗ್ಗೆ ಮೊದಲೇ ಮುನ್ನೆಚ್ಚರಿಕೆ ವಹಿಸಿ, ಅದಕ್ಕೆ ತಕ್ಕಂತೆ ಪ್ಲಾನಿಂಗ್‌ ಮಾಡಿಕೊಳ್ಳುವುದು ಉತ್ತಮ. ರಿಸೆಶನ್‌ ಹಾಗೂ ಉದ್ಯೋಗ ಕಡಿತದ ಸಂದರ್ಭದಲ್ಲಿ ಹಣಕಾಸು ವಹಿವಾಟುಗಳನ್ನು ಹೇಗೆ ಯೋಜಿಸುವುದು? ಕಾರ್ಯತಂತ್ರ ರೂಪಿಸುವುದು ಹೇಗೆ ಎಂಬುದನ್ನು ನಾವು ನೋಡೋಣ.  

ಮಾಸಿಕ ಬಜೆಟ್

ಸಾಮಾನ್ಯವಾಗಿ ಎಲ್ಲರೂ ಮಾಸಿಕ ಬಜೆಟ್‌ ಸಿದ್ಧಪಡಿಸುತ್ತಾರೆ. ಆದ್ರೆ ಆರ್ಥಿಕ ಹಿನ್ನಡೆಯಿದ್ದಾಗ ಬಜೆಟ್‌ ಕೊಂಚ ವಿಭಿನ್ನವಾಗಿರುತ್ತದೆ. ಇಲ್ಲಿ ನೀವು ಮಿತವ್ಯಯ ಮಾಡಬೇಕು. ಬೇಡವಾದ ಅಥವಾ ಅತ್ಯಂತ ಅಗತ್ಯವಲ್ಲದ ವಸ್ತುಗಳಿಗೆ ಹಣವನ್ನು ಖರ್ಚು ಮಾಡಬೇಡಿ. ಅಗತ್ಯ ವಸ್ತುಗಳಿಗೆ ಮಾತ್ರ ಹಣವನ್ನು ವ್ಯಯಿಸಿ.

ಅನವಶ್ಯಕ ವಸ್ತುಗಳಿಗೆ ಖರ್ಚು ಬೇಡ

ಅನಗತ್ಯ ವಿಹಾರಗಳನ್ನು ಪ್ಲಾನ್‌ ಮಾಡಿಕೊಳ್ಳಬೇಡಿ. ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಹೋಟೆಲ್‌ ತಿಂಡಿ ತಿನಿಸು  ಸೇವನೆಯನ್ನು ನಿಲ್ಲಿಸಿಬಿಡಿ. ಸಿನೆಮಾ ಸೇರಿದಂತೆ ಇತರ ಮನರಂಜನೆಯನ್ನು ನಂತರವೂ ಆನಂದಿಸಬಹುದು. ಆರ್ಥಿಕ ಮುಗ್ಗಟ್ಟು ಇದ್ದಾಗ ಅವುಗಳಿಂದ ದೂರವಿರಿ.

ಶಾಪಿಂಗ್

ಅತಿ ಅಗತ್ಯವಿರುವದನ್ನು ಮಾತ್ರ ಖರೀದಿಸಿ ಮತ್ತು ಈಗಾಗಲೇ ನಿಮ್ಮ ಬಳಿ ಇರುವ ವಸ್ತುವಿಗೆ ಮತ್ತೆ ಮತ್ತೆ ಹಣ ಹಾಕಬೇಡಿ. ಆನ್‌ಲೈನ್‌ ಶಾಪಿಂಗ್‌ನಿಂದ ಹೆಚ್ಚು ಆಕರ್ಷಿತರಾಗಬೇಡಿ. ನಿಮ್ಮ ಪ್ರಚೋದನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಮಕ್ಕಳು ಸೇರಿದಂತೆ ಇಡೀ ಕುಟುಂಬಕ್ಕೆ ಇದು ಅನ್ವಯಿಸುತ್ತದೆ. ಕೋಪೋದ್ರೇಕ ಮತ್ತು ಭಾವನಾತ್ಮಕತೆಗೆ ಬೀಳಬೇಡಿ.

ದೊಡ್ಡ ಉತ್ಪನ್ನಗಳು

ಖಾಸಗಿ ಜೆಟ್, ವಿಮಾನದಲ್ಲಿ ಪ್ರಯಾಣ ಇವುಗಳಿಂದ ದೂರವಿರಿ. ಟಿವಿ ಸೆಟ್‌ಗಳು, ಫೋನ್‌, ಕಾರು, ಬೈಕ್‌, ರೆಫ್ರಿಜರೇಟರ್‌, ಮೈಕ್ರೋವೇವ್‌ ಹೀಗೆ ದುಬಾರಿ ವಸ್ತುಗಳನ್ನು ಕೊಂಡುಕೊಳ್ಳಬೇಡಿ. ಕಡಿಮೆ ಬಜೆಟ್‌ನಲ್ಲಿ ಆಗುವಂಥದ್ದನ್ನು ಮಾತ್ರ ಖರೀದಿಸಿ. ಅಗತ್ಯವಿದ್ದಲ್ಲಿ ಅವುಗಳನ್ನು ಆರ್ಥಿಕ ಸ್ಥಿತಿ ಸುಧಾರಿಸಿದ ಮೇಲೆ ಕೊಂಡುಕೊಳ್ಳಬಹುದು.

ತುರ್ತು ನಿಧಿ

ತುರ್ತು ನಿಧಿಯನ್ನು ಕೇವಲ ತುರ್ತು ಉದ್ದೇಶಗಳಿಗಾಗಿ ಬಳಸಿ.  ಅನಾರೋಗ್ಯ, ಆಕ್ಸಿಡೆಂಟ್‌ಗಳು ಇಂತಹ ಸಂದರ್ಭದಲ್ಲಿ ಹಣಕಾಸಿನ ಅಗತ್ಯವಿರುತ್ತದೆ. ಹಾಗಾಗಿ ಇದ್ದ ಹಣವನ್ನೆಲ್ಲ ಸಂಪೂರ್ಣ ಖಾಲಿ ಮಾಡಿಕೊಳ್ಳಬೇಡಿ. ತುರ್ತು ಸಂದರ್ಭಗಳಿಗಾಗಿ ಹಣವನ್ನು ಎತ್ತಿಟ್ಟುಕೊಳ್ಳಿ.

ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್‌ಗಳು

ಆರ್ಥಿಕ ಹಿಂಜರಿತವಿದ್ದಾಗ ಸಾಲ ಪಡೆಯುವ ಸಾಹಸ ಮಾಡಬೇಡಿ. ಜೊತೆಗೆ ಕ್ರೆಡಿಟ್‌ ಕಾರ್ಡ್‌ ಬಳಕೆಯಿಂದ್ಲೂ ದೂರವಿರುವುದು ಉತ್ತಮ. ಸಾಲ ಪಡೆದರೂ ಅದನ್ನು ಬಡ್ಡಿ ಸಮೇತ ಹಿಂದಿರುಗಿಸಬೇಕೆಂಬುದು ನಿಮ್ಮ ಗಮನದಲ್ಲಿರಲಿ.  ಇವೆಲ್ಲ ಕೆಲವು ಸಲಹೆಗಳಷ್ಟೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಇವನ್ನೆಲ್ಲ ಸರಿಯಾಗಿ ಯೋಜಿಸಿಕೊಳ್ಳುವ ಜವಾಬ್ಧಾರಿ ನಿಮ್ಮ ಮೇಲೆಯೇ ಇದೆ. ಅಗತ್ಯತೆಗಳು ಮತ್ತು ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಪ್ಲಾನಿಂಗ್‌ ಮಾಡಿಕೊಳ್ಳಿ. ನಿಮ್ಮ ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಪರಿಚಯಸ್ಥರಿಂದ ಹಣ ನಿರ್ವಹಣೆಯ ಬಗ್ಗೆ ತಿಳಿದುಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...