alex Certify ಜಂತು ಹುಳಗಳ ನಿವಾರಣೆಗೆ ಪರಿಣಾಮಕಾರಿ ಮನೆಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಂತು ಹುಳಗಳ ನಿವಾರಣೆಗೆ ಪರಿಣಾಮಕಾರಿ ಮನೆಮದ್ದು

ಹೊಟ್ಟೆ ಹುಳಗಳ ಸಮಸ್ಯೆ ಬಹುತೇಕ ಎಲ್ಲರಲ್ಲೂ ಇದೆ. ಜಂತು ಹುಳಗಳು ಹೊಟ್ಟೆಯಲ್ಲಿ ಸೇರಿಕೊಂಡಾಗ ಆಹಾರದ ಮೂಲಕ ನಾವು ಪಡೆಯಬೇಕಾದ ಎಲ್ಲಾ ಪೋಷಕಾಂಶಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ, ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗುತ್ತದೆ, ಕ್ರಮೇಣ ದೇಹವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಶುಚಿತ್ವದ ಬಗ್ಗೆ ಕಾಳಜಿ ವಹಿಸದೇ ಇದ್ದಾಗ ಜಂತು ಹುಳಗಳಾಗುತ್ತವೆ. ಜೊತೆಗೆ ಅನಾರೋಗ್ಯಕರ ಆಹಾರ ಸೇವನೆಯೂ ಇದಕ್ಕೆ ಕಾರಣ. ಅದರಲ್ಲೂ ಚಿಕ್ಕ ಮಕ್ಕಳಿಗೆ ಜಂತು ಹುಳಗಳ ತೊಂದರೆ ಸಾಮಾನ್ಯ. ಇದಕ್ಕೆ ಕೆಲವೊಂದು ಮನೆಮದ್ದುಗಳಲ್ಲಿ ಪರಿಹಾರವಿದೆ.

ಕಲೋಂಜಿ : ನಮ್ಮ ಹೊಟ್ಟೆಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾದ ಅನೇಕ ಆಯುರ್ವೇದ ಗುಣಗಳು ಕಲೋಂಜಿಯಲ್ಲಿ ಕಂಡುಬರುತ್ತವೆ. 10 ಗ್ರಾಂ ಕಲೋಂಜಿ ಪುಡಿಯನ್ನು 3 ಚಮಚ ಜೇನುತುಪ್ಪದೊಂದಿಗೆ ಬೆರೆಸಿ ರಾತ್ರಿ ಮಲಗುವ ಮುನ್ನ ತಿಂದರೆ ಹುಳಗಳು ನಿವಾರಣೆಯಾಗುತ್ತವೆ.

ಕಾಳುಮೆಣಸು: ಆಯುರ್ವೇದ ಔಷಧಗಳಲ್ಲಿ ಮಾತ್ರವಲ್ಲ ನಿತ್ಯದ ಅಡುಗೆಗೂ ನಾವು ಕಾಳುಮೆಣಸು ಬಳಸುತ್ತೇವೆ. ಈ ಮಸಾಲೆ ಪದಾರ್ಥ ಅತ್ಯಂತ ಪರಿಣಾಮಕಾರಿ ಔಷಧಗಳಲ್ಲೊಂದು. ಒಂದು ಲೋಟ ಮಜ್ಜಿಗೆಗೆ ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಬೆರೆಸಿ ರಾತ್ರಿ ಕುಡಿದರೆ ಹೊಟ್ಟೆ ಹುಳುಗಳು ನಾಶವಾಗುತ್ತವೆ.

ಜೇನುತುಪ್ಪ: ಜೇನುತುಪ್ಪವು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಬ್ಯಾಕ್ಟೀರಿಯಾ ಮತ್ತು ಎಂಟಿಒಕ್ಸಿಡೆಂಟ್ ಗುಣಲಕ್ಷಣಗಳು ಕಂಡುಬರುತ್ತವೆ. ಸೆಲರಿ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಹುಳುಗಳು ನಾಶವಾಗುತ್ತವೆ.

ಮೂಲಂಗಿ: ಚಳಿಗಾಲದಲ್ಲಿ ಮೂಲಂಗಿಯನ್ನು ತಿನ್ನುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ಋತುವಿನಲ್ಲಿ ಹೊಟ್ಟೆಯಲ್ಲಿ ಹುಳುಗಳಿದ್ದರೆ ಮೂಲಂಗಿಯ ರಸವನ್ನು ತೆಗೆದು ಅದಕ್ಕೆ ಕಾಳುರಿಮೆಣಸಿನ ಪುಡಿ ಮತ್ತು ಬ್ಲಾಕ್‌ ಸಾಲ್ಟ್‌ ಬೆರೆಸಿಕೊಂಡು ದಿನಕ್ಕೆರಡು ಬಾರಿ ಕುಡಿಯಿರಿ.

ಕ್ಯಾರೆಟ್‌: ಕ್ಯಾರೆಟ್ ಅನ್ನು ತುಂಬಾ ಪೌಷ್ಟಿಕ ತರಕಾರಿಯಾಗಿ ಸೇವಿಸಲಾಗುತ್ತದೆ. ಹೊಟ್ಟೆಯಿಂದ ಹುಳುಗಳನ್ನು ತೆಗೆದುಹಾಕಲು ಕ್ಯಾರೆಟ್‌ ಸಹಕಾರಿಯಾಗಿದೆ. ಕ್ಯಾರೆಟ್‌ನ ಫರ್ಮೆಂಟೆಡ್‌ ಪಾನೀಯ ತಯಾರಿಸಿಕೊಂಡು 4 ರಿಂದ 5 ದಿನಗಳವರೆಗೆ ಕುಡಿಯಿರಿ. ಹೀಗೆ ಮಾಡುವುದರಿಂದ ಜಂತು ಹುಳಗಳು ನಿವಾರಣೆಯಾಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...