alex Certify ‘ಛೋಟಿ ಬಚ್ಚಿ ಹೋ ಕ್ಯಾ..! ‘ ತಂಗಿಗೇನೇ ಅವಾಜ್ ಹಾಕಿದ ಕಿಲಿಪೌಲ್​​: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಛೋಟಿ ಬಚ್ಚಿ ಹೋ ಕ್ಯಾ..! ‘ ತಂಗಿಗೇನೇ ಅವಾಜ್ ಹಾಕಿದ ಕಿಲಿಪೌಲ್​​: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

‘ಛೋಟಿ ಬಚ್ಚಿ ಹೋ ಕ್ಯಾ..!’ ಇತ್ತಿಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿರೋ ಬಾಲಿವುಡ್ ಸಿನೆಮಾ ಡೈಲಾಗ್. ಈಗ ಇದೇ ಡೈಲಾಗ್ ಇಟ್ಟುಕೊಂಡು ತಂಗಿಗೆನೇ ಅವಾಜ್ ಹಾಕಿದ್ಧಾರೆ ಕಿಲಿಪೌಲ್. ಕಿಲಿಪೌಲ್ ಮತ್ತು ನಿಮ್​ಪೌಲ್​ ಮಾಡಿರೋ ಈ ವಿಡಿಯೋ ನೋಡಿ ಸೂಪರ್ ಅಂತ ಹೇಳ್ತಿದ್ದಾರೆ ನೆಟ್ಟಿಗರು.

ಕಿಲಿಪೌಲ್ ಮತ್ತು ನಿಮ್​ಪೌಲ್ ಆಗಾಗ ಬಾಲಿವುಡ್ ಸಿನೆಮಾದ ಹಾಡು, ಡೈಲಾಗ್, ಡಾನ್ಸ್ ಮಾಡಿ ಆ ರೀಲ್ಸ್​ಗಳನ್ನ ಸಾಮಾಜಿಕ ತಾಣಗಳಲ್ಲಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಅವರು ಮಾಡಿರೋ ಅನೇಕ ವಿಡಿಯೋಗಳು ವೈರಲ್ ಕೂಡಾ ಆಗಿವೆ. ಈಗ ಮತ್ತೆ ಅಣ್ಣ-ತಂಗಿ ಇವರಿಬ್ಬರು ಮತ್ತೆ ಟೈಗರ್ ಶ್ರಾಫ್ ನಟನೆಯ ಬಾಲಿವುಡ್ ಸಿನೆಮಾದ ಡೈಲಾಗ್ ವಿಡಿಯೋ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಹಾಕಿದ್ದಾರೆ. ಈ ವಿಡಿಯೋ ನೋಡಿ ಜನರು ಫುಲ್ ಫಿದಾ ಆಗ್ಹೋಗಿದ್ದಾರೆ.

ಭಾಷೆ ಗೊತ್ತಿಲ್ಲ, ಅದರ ಅರ್ಥವೂ ಗೊತ್ತಿಲ್ಲ, ಆದರೂ ದೂರದ ತಾಂಜೇನಿಯಾದ ಅಣ್ಣ-ತಂಗಿ ಮಾಡಿರೋ ವಿಡಿಯೋಗಳನ್ನ ನೋಡಿ, ನೆಟ್ಟಿಗರು ಎಂಜಾಯ್ ಮಾಡ್ತಿದ್ದಾರೆ. ಅಷ್ಟೆ ಅಲ್ಲ ಇವರ ಈ ಪ್ರಯತ್ನಕ್ಕೆ ಮೆಚ್ಚುಗೆಯನ್ನ ಕೂಡಾ ಸೂಚಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...