alex Certify ಚೆನ್ನಾಗಿರುತ್ತೆ ʼನೇಚರ್’ ಜೊತೆ ಬೆಳೆದ ಮಕ್ಕಳ ‘ಫ್ಯೂಚರ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೆನ್ನಾಗಿರುತ್ತೆ ʼನೇಚರ್’ ಜೊತೆ ಬೆಳೆದ ಮಕ್ಕಳ ‘ಫ್ಯೂಚರ್’

 

ಮಕ್ಕಳು ಮಣ್ಣಿನಲ್ಲಿ ಆಡಿದರೆ, ಹುಲ್ಲುಹಾಸಿನ ಮೇಲೆ ಮಲಗಿದರೆ ಪಾಲಕರು ಮೈಕೈ ಮಣ್ಣಾಗುತ್ತದೆ ಎಂದು ಗದರಿಸುವುದನ್ನು ಕೇಳಿದ್ದೀರಿ. ಜೊತೆಗೆ ಅದೇ ಸರಿ ಎಂದುಕೊಂಡವರೂ ಹಲವರಿದ್ದಾರೆ.

ಆದರೆ ಅದು ಸರಿಯಲ್ಲ ಎನ್ನುತ್ತಿದ್ದಾರೆ ಹಾಂಕಾಂಗ್ ಯುನಿವರ್ಸಿಟಿಯ ತಜ್ಞರು. ಏಕೆಂದರೆ ಅವರು ನಡೆಸಿರುವ ಅಧ್ಯಯನದ ಪ್ರಕಾರ ನೇಚರ್ ಜೊತೆಗೆ ಬೆಳೆದ ಮಕ್ಕಳ ಪ್ರೆಸೆಂಟ್ – ಫ್ಯೂಚರ್ ಚೆನ್ನಾಗಿರುತ್ತಂತೆ.

ಆಧುನಿಕ ಜಗತ್ತಿನ ಒತ್ತಡದಿಂದಾಗಿ ಮಕ್ಕಳೂ ಬೇಸರದಲ್ಲಿ ಇರುವಂತಾಗಿದೆ. ಆದರೆ ಅವರನ್ನು ದಿನದ ಕೆಲ ಕಾಲ ಪ್ರಕೃತಿಯ ಮಡಿಲಲ್ಲಿ ಬಿಟ್ಟರೆ ಲವಲವಿಕೆಯಿಂದ ಖುಷಿಯಾಗಿರುತ್ತಾರೆ.

ಅವರ ವರ್ತನೆ ಹಾಗೂ ಭಾವನೆಗಳಿಗೆ ಸಂಬಂಧಿಸಿದ ಸಮಸ್ಯೆಗಳೂ ನಿವಾರಣೆಯಾಗುತ್ತವೆ. ಅಲ್ಲದೆ ಅವರ ಆರೋಗ್ಯದಲ್ಲೂ ವ್ಯಾಪಕ ಸುಧಾರಣೆ ಕಂಡು ಬರುತ್ತದೆ ಎಂದು ಈ ಅಧ್ಯಯನ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...