alex Certify ಚೀನಾ ವಿಮಾನ ಪತನ: ಅವಶೇಷಗಳಡಿ ಜೀವಂತವಾಗಿದ್ದವರ್ಯಾರು ಪತ್ತೆಯಾಗಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀನಾ ವಿಮಾನ ಪತನ: ಅವಶೇಷಗಳಡಿ ಜೀವಂತವಾಗಿದ್ದವರ್ಯಾರು ಪತ್ತೆಯಾಗಿಲ್ಲ

132 ಮಂದಿ ಪ್ರಯಾಣಿಕರನ್ನು ಹೊತ್ತಿದ್ದ ಚೀನಾದ ವಿಮಾನವು ನಿನ್ನೆ ದಕ್ಷಿಣ ಗುವಾಂಗ್ಸಿ ಪ್ರಾಂತ್ಯದಲ್ಲಿ ಸೋಮವಾರ ಪತನಗೊಂಡಿತ್ತು, ಈ ವಿಮಾನ ಪತನದ ಬಳಿಕ ಉಳಿದ ಅವಶೇಷಗಳಲ್ಲಿ ಯಾರೊಬ್ಬರೂ ಬದುಕಿದ್ದವರು ಪತ್ತೆಯಾಗಿಲ್ಲ ಎಂದು ಸಿಸಿ ಟಿವಿ ಹೇಳಿದೆ.

ಘಟನಾ ಸ್ಥಳದಲ್ಲಿ ವಿಮಾನದ ಅವಶೇಷಗಳು ಕಂಡುಬಂದಿವೆ. ಇಲ್ಲಿಯವರೆಗೆ ಸಂಪರ್ಕ ಕಳೆದುಕೊಂಡ ಈ ವಿಮಾನದಲ್ಲಿದ್ದ ಯಾರೂ ಪತ್ತೆಯಾಗಿಲ್ಲ ಎಂದು ಸಿಸಿ ಟಿವಿ ಹೇಳಿದೆ.

ಇಂದು ಬೆಳಗ್ಗೆ ಕೂಡ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗಿವೆ. ಈ ವಿಮಾನದಲ್ಲಿದ್ದ ಎಲ್ಲಾ 123 ಮಂದಿ ಪ್ರಯಾಣಿಕರು ಹಾಗೂ 9 ಮಂದಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಚೀನಾದ ವಿದೇಶಾಂಗ ಸಚಿವ ವಾಂಗ್​ ಯಿ, ನಾವು ಶೋಧ ಕಾರ್ಯವನ್ನು ನಡೆಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಶೀಘ್ರದಲ್ಲಿಯೇ ವಿಮಾನ ಪತನಕ್ಕೆ ಕಾರಣವನ್ನೂ ಕಂಡು ಹಿಡಿಯುತ್ತೇವೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...