alex Certify ಚೀನಾದಲ್ಲಿ ದುರಂತಕ್ಕೀಡಾದ ವಿಮಾನದ ಬ್ಲ್ಯಾಕ್​ ಬಾಕ್ಸ್​ ಪತ್ತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀನಾದಲ್ಲಿ ದುರಂತಕ್ಕೀಡಾದ ವಿಮಾನದ ಬ್ಲ್ಯಾಕ್​ ಬಾಕ್ಸ್​ ಪತ್ತೆ..!

ದಕ್ಷಿಣ ಚೀನಾದಲ್ಲಿ ವಿಮಾನ ಪತನಗೊಂಡು 2 ದಿನಗಳ ಬಳಿಕ ಬ್ಲ್ಯಾಕ್​ ಬಾಕ್ಸ್​ ಪತ್ತೆಯಾಗಿದೆ ಎಂದು ವಾಯುಯಾನ ನಿಯಂತ್ರಕದ ಅಧಿಕಾರಿ ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿದ್ದ 2 ಬ್ಲ್ಯಾಕ್​ಬಾಕ್ಸ್​ಗಳಲ್ಲಿ ಒಂದು ಪತ್ತೆಯಾಗಿದ್ದು ಇದು ತೀವ್ರವಾಗಿ ಹಾನಿಗೊಳಗಾಗಿದೆ ಎನ್ನಲಾಗಿದೆ.

ರೆಕಾರ್ಡರ್​ ಎಷ್ಟು ಹಾನಿಗೊಳಗಾಗಿದೆ ಎಂದರೆ ಅದು ಫ್ಲೈಟ್​ ಡೇಟಾ ರೆಕಾರ್ಡರ್​ ಅಥವಾ ಕಾಕ್​ಪಿಟ್​ ಧ್ವನಿ ರೆಕಾರ್ಡರ್​ ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ.

ಬೋಯಿಂಗ್​ 737 ಜೆಟ್​ ವಿಮಾನವು ಬೆಟ್ಟದ ಮೇಲೆ ಪತನಗೊಳ್ಳುವ ಮೊದಲು ಶಬ್ದದ ವೇಗದಲ್ಲಿ ಆಕಾಶದಿಂದ ಹೇಗೆ ಧುಮುಕಿತು ಎಂಬುದನ್ನು ತಿಳಿದುಕೊಳ್ಳಲು ಈ ಬ್ಲ್ಯಾಕ್​ ಬಾಕ್ಸ್​ ಪ್ರಮುಖ ಅಸ್ತ್ರವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...