alex Certify ಚಿತ್ರ ಪ್ರಚಾರದ ವೇಳೆಯೇ ಲೈಂಗಿಕ ಕಿರುಕುಳ; ಆಘಾತಕಾರಿ ಘಟನೆ ಬಿಚ್ಚಿಟ್ಟ ನಟಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿತ್ರ ಪ್ರಚಾರದ ವೇಳೆಯೇ ಲೈಂಗಿಕ ಕಿರುಕುಳ; ಆಘಾತಕಾರಿ ಘಟನೆ ಬಿಚ್ಚಿಟ್ಟ ನಟಿಯರು

ಸ್ಯಾಟರ್‌ಡೇ ನೈಟ್‌ ಚಿತ್ರದ ಪ್ರಚಾರಕ್ಕಾಗಿ ರಾಜ್ಯ ಪ್ರವಾಸ ಮಾಡ್ತಿದ್ದಾಗ ಮಲಯಾಳಂ ನಟಿಯರಿಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ವರದಿಯಾಗಿದೆ. ನಟಿಯೊಬ್ಬಳು ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ ವ್ಯಕ್ತಿಗೆ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋ ಹೊರಬಂದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಚಿತ್ರತಂಡ ಪ್ರಮೋಷನ್‌ಗಾಗಿ ಘಟನೆ ಕೋಝಿಕ್ಕೋಡ್‌ನ ಹೈಲೈಟ್‌ ಮಾಲ್‌ಗೆ ಆಗಮಿಸಿತ್ತು. ಈ ವೇಳೆ ನಟ, ನಟಿಯರು ಅಲ್ಲಿಂದ ನಿರ್ಗಮಿಸುವಾಗ ನೂಕು ನುಗ್ಗಲು ಉಂಟಾಯ್ತು. ಸ್ಥಳದಲ್ಲಿ ಕಾಲ್ತುಳಿತ ಕೂಡ ಸಂಭವಿಸಿದೆ. ಜನಸಂದಣಿಯ ನಡುವೆಯೇ ಅವರನ್ನು ಕರೆದೊಯ್ಯುತ್ತಿದ್ದಾಗ ನಟಿಯರಿಗೆ ಅಪರಿಚಿತ ವ್ಯಕ್ತಿಗಳು ಕಿರುಕುಳ ನೀಡಿದ್ದಾರೆ.

ಈ ಬಗ್ಗೆ ಖುದ್ದು ನಟಿಯೇ ವಿವರಗಳನ್ನು ಹಂಚಿಕೊಂಡಿದ್ದಾರೆ. ಮಾಲ್‌ನಲ್ಲಿ ಜನಜಂಗುಳಿಯೇ ಇತ್ತು. ಜನಸಂದಣಿಯನ್ನು ನಿಭಾಯಿಸಲು ಭದ್ರತಾ ಸಿಬ್ಬಂದಿ ಹೆಣಗಾಡುತ್ತಿದ್ರು. ಈವೆಂಟ್‌ನ ನಂತರ, ನಾನು ಮತ್ತು ನನ್ನ ಕೋಸ್ಟಾರ್ ಒಬ್ಬರು ಹೊರಟೆವು. ಈ ವೇಳೆ ಕೆಲವರು ನನ್ನ ಸಹೋದ್ಯೋಗಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ವಿಪರೀತ ಜನರಿದ್ದಿದ್ದರಿಂದ ಆಕೆಗೆ ಪ್ರತಿಕ್ರಿಯಿಸಲು ಅವಕಾಶ ಸಿಗಲಿಲ್ಲ. ನಾನು ಕೂಡ ಇದೇ ರೀತಿಯ ಸಂದರ್ಭವನ್ನು ಎದುರಿಸಿದೆ. ಆಘಾತಗೊಂಡ ನಾನು ತಕ್ಷಣಕ್ಕೆ ಪ್ರತಿಕ್ರಿಯಿಸಿದೆ ಅಂತಾ ನಟಿ ವೈರಲ್‌ ಆಗಿರೋ ವಿಡಿಯೋ ಬಗ್ಗೆ ಬರೆದುಕೊಂಡಿದ್ದಾರೆ.

ಮತ್ತೋರ್ವ ನಟಿ ಕೂಡ ಈ ಬಗ್ಗೆ ಪೋಸ್ಟ್‌ ಮಾಡಿದ್ದು, ಸ್ಯಾಟರ್ಡೇ ನೈಟ್‌ ಪ್ರಚಾರದ ಸಮಯದಲ್ಲಿ, ಕೋಝಿಕ್ಕೋಡ್‌ನ ಹೈಲೈಟ್ ಮಾಲ್‌ನಲ್ಲಿ ಭಯಾನಕ ಅನುಭವವಾಯ್ತು. ಕಿಕ್ಕಿರಿದ ಸ್ಥಳದಿಂದ ನಿರ್ಗಮಿಸುವಾಗ, ಯಾರೋ ನನ್ನನ್ನು ತಬ್ಬಿಕೊಂಡರು. ಆತ ನನ್ನನ್ನು ಎಲ್ಲಿ ಮುಟ್ಟಿದನು ಎಂದು ಹೇಳಲು ನನಗೆ ಸಾಧ್ಯವಾಗುತ್ತಿಲ್ಲ. ನಾವು ಪ್ರಚಾರಕ್ಕಾಗಿ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದೇವೆ, ಆದರೆ ಇಂತಹ ಅಸಹ್ಯಕರ ಅನುಭವ ಎಂದಿಗೂ ಇರಲಿಲ್ಲ. ನಾನು ಒಂದು ಕ್ಷಣ ನಿಶ್ಚೇಷ್ಟಿತಳಾದೆ ಎಂದು ಬರೆದುಕೊಂಡಿರುವ ನಟಿ, ‘ನಿನ್ನ ಕಾಯಿಲೆ ಮುಗಿದಿದೆಯೇʼ?ಎಂದು ಕಾಮುಕನನ್ನು ಪ್ರಶ್ನಿಸಿದ್ದಾರೆ. ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದವರ ವಿರುದ್ಧ ನಟಿಯರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...