alex Certify ಚಾಲೆಂಜಿಂಗ್ ಸ್ಟಾರ್ ಮನೆಗೆ ಹೊಸ ಅತಿಥಿ ಆಗಮನ; ದರ್ಶನ್ ʼಸಾರಥಿʼ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲೆಂಜಿಂಗ್ ಸ್ಟಾರ್ ಮನೆಗೆ ಹೊಸ ಅತಿಥಿ ಆಗಮನ; ದರ್ಶನ್ ʼಸಾರಥಿʼ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್

Actor Darshan buys Land Rover Defender luxury SUV worth Rs 2.13 crore | Auto News | Zee Newsಇತ್ತೀಚೆಗೆ ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆಗೆ ಬಂದ ಹೊಸ ಅತಿಥಿಯದ್ದೇ ಸುದ್ದಿ. ಹೊಸ ಅತಿಥಿಯ ಗತ್ತು ಗೈರತ್ತು ನೋಡಿ ದರ್ಶನ್ ಸೇರಿದಂತೆ ಅವರ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಆದರೆ ಈ ಅತಿಥಿ, ಅಂತಿಂಥ ಅತಿಥಿಯಲ್ಲ ಸಖತ್ ಕಾಸ್ಟ್ಲಿಯಸ್ಟ್ ಅತಿಥಿಯಾಗಿದೆ. ಈ ಅತಿಥಿ ಹೆಸರು ಲ್ಯಾಂಡ್ ರೋವರ್ ಡಿಫೆಂಡರ್ ಎಸ್​​ಯುವಿ,

ದುಬಾರಿ ಬೆಲೆಯ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್​ಯುವಿಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಖರೀದಿಸಿದ್ದಾರೆ. ದರ್ಶನ್ ಅವರಿಗೆ ಕಾರ್ ಕ್ರೇಜ್ ಯಾವ ಮಟ್ಟಿಗೆ ಇದೆ ಅನ್ನೋದು ಎಲ್ಲರಿಗೂ ಗೊತ್ತು. ಅವರ ಬಳಿ ಒಂದಕ್ಕಿಂತ ಒಂದು ಕಾರುಗಳ ಸಂಗ್ರಹವಿದೆ. ಇದೀಗ ಲ್ಯಾಂಡ್ ರೋವರ್ ಡಿಫೆಂಡರ್ ಎಸ್​​ಯುವಿಯು ಈ ಸಾಲಿಗೆ ಹೊಸ ಸೇರ್ಪಡೆಯಾಗಿದೆ. ದರ್ಶನ್ ಅವರ ಹೊಸ ಕಾರಿನ ಚಿತ್ರ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.

ಭಾರತದ ಮಾರುಕಟ್ಟೆಗೆ ಬಂದಿರುವ ಹಲವಾರು ಐಶಾರಾಮಿ ಕಾರ್​ಗಳಲ್ಲಿ ಅನೇಕ ಹೈ-ಫೈ ಕಾರು, ದರ್ಶನ್ ಬಳಿ ಇದೆ. ಈ ಲಿಸ್ಟ್​​ಗೆ ಇತ್ತೀಚೆಗಷ್ಟೆ 2.13 ಕೋಟಿ ಮೌಲ್ಯದ ರೇಂಜ್ ರೋವರ್ ಡಿಫೆಂಡರ್ ಲಕ್ಸುರಿ SUV ಕೂಡಾ ಸೇರಿದೆ.

ಐಶಾರಾಮಿ ಕಾರುಗಳಲ್ಲಿ ಟಾಪ್ ಲಿಸ್ಟ್​ನಲ್ಲಿ ರೇಂಜ್ ರೋವರ್ ಡಿಫೆಂಡರ್ ಲಕ್ಸುರಿ SUV ಕಾರು ಕೂಡಾ ಒಂದಾಗಿದೆ. ಬಾಲಿವುಡ್ ನಟರಾದ ಸನ್ನಿ ಡಿಯೋಲ್, ಅರ್ಜುನ್ ಕಪೂರ್, ಪ್ರಕಾಶ್ ​ರಾಜ್​ ಮತ್ತು ಇತರರು ಈ ಐಷಾರಾಮಿ ಕಾರನ್ನ ಹೊಂದಿದ್ದಾರೆ. ಈಗಾಗಲೇ ದರ್ಶನ್ ಬಳಿ ಲ್ಯಾಂಬೋರ್ಗಿನಿ ಉರುಸ್, ಹ್ಯುರಾಕನ್ ಮತ್ತು ಇಂತಹ ಅನೇಕ ಕಾಸ್ಟ್ಲಿಯಸ್ಟ್ ಕಾರುಗಳಿದ್ದು, ಆ ಕಾರುಗಳ ಲಿಸ್ಟ್​ನಲ್ಲಿ ಈ ಕಾರು ಕೂಡಾ ಈಗ ಸೇರಿದೆ.

ಮೊದಲ ನೋಟದಲ್ಲಿಯೇ ಡಿಫೆಂಡರ್ ಎಸ್‌ಯುವಿಯು ತನ್ನ ಗಾತ್ರದಿಂದ ಗಮನ ಸೆಳೆಯುತ್ತದೆ. ಈ ಎಸ್‌ಯುವಿಯಲ್ಲಿರುವ ಕಪ್ಪು ಬಣ್ಣದ ಬ್ಯಾಡ್ಜ್‌ಗಳನ್ನು ಹೊಂದಿರುವ ಪ್ಯಾಂಗಿಯಾ ಗ್ರೀನ್ ಬಣ್ಣವು ಆಕರ್ಷಕವಾಗಿ ಕಾಣುತ್ತದೆ. ಈ ಎಸ್‌ಯುವಿಯ ಮುಂಭಾಗದಲ್ಲಿ ಡಿಆರ್‌ಎಲ್‌ ಹೊಂದಿರುವ ಎಲ್‌ಇಡಿ ಹೆಡ್‌ಲೈಟ್ ಯುನಿಟ್ ಅಳವಡಿಸಲಾಗಿದೆ. ಇಂತಹ ಅನೇಕ ವಿಶೇಷತೆಗಳನ್ನ ಹೊಂದಿರುವ ಈ ಕಾರು ಈಗ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಲ್ಲಿದೆ. ಈಗ ಈ ಕಾರು ದರ್ಶನ್ ಅವರ ಕಾರು ಕಲೆಕ್ಷನ್​ಗಳಲ್ಲಿ ಸೇರಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...