alex Certify ಚಾಲಕನಿಲ್ಲದೇ ರಸ್ತೆಯಲ್ಲಿ ಸಾಗಿದ ಖಾಲಿ ಸೈಕಲ್ ರಿಕ್ಷಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲಕನಿಲ್ಲದೇ ರಸ್ತೆಯಲ್ಲಿ ಸಾಗಿದ ಖಾಲಿ ಸೈಕಲ್ ರಿಕ್ಷಾ….!

ಜನ‌ನಿಬಿಡ ರಸ್ತೆಯಲ್ಲಿ ಖಾಲಿ ಸೈಕಲ್ ರಿಕ್ಷಾವೊಂದು ಚಲಿಸಿದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಹೌಹಾರಿದ್ದಾರೆ.

ಈ ವಿಲಕ್ಷಣ ವಿಡಿಯೋ ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ಕ್ಲಿಪ್ ವೈರಲ್ ಆಗಿದ್ದು, ಖಂಡಿತವಾಗಿಯೂ ಆಶ್ಚರ್ಯಗೊಳಿಸುತ್ತದೆ.

ವಿಡಿಯೋದಲ್ಲಿ ಕಾಣಿಸುವಂತೆ ಚಂಡಮಾರುತದ ಸಮಯದಲ್ಲಿ ಜನನಿಬಿಡ ರಸ್ತೆ ಕಾಣಿಸುತ್ತದೆ, ಕೆಲವು ಸೆಕೆಂಡುಗಳು ಸೈಕಲ್ ರಿಕ್ಷಾವೊಂದು ರಸ್ತೆಯ ಮೇಲೆ ಸಾಗುವುದನ್ನು ಕಾಣಬಹುದು. ಯಾರೂ ಅದನ್ನು ಓಡಿಸಲಿಲ್ಲ ಮತ್ತು ಯಾರೂ ಅದರಲ್ಲಿ ಕುಳಿತುಕೊಂಡಿರಲಿಲ್ಲ. ಮುಂದೆ ಹೋಗಿ ನಂತರ ಸರಾಗವಾಗಿ ಪಾದಚಾರಿ ಮಾರ್ಗಕ್ಕೆ ಹಿಂತಿರುಗುತ್ತದೆ.

ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಬಂದಿವೆ. ರಿಕ್ಷಾವನ್ನು ಎಲೋನ್ ಮಸ್ಕ್ ನೋಡಿದರೆ ಹೆಮ್ಮೆಪಡುತ್ತಾರೆ ಎಂದು ಒಬ್ಬರು ಹೇಳಿದರೆ, ದೆವ್ವ ಎಂದು ಮತ್ತೊಬ್ಬರು ಹೇಳಿದ್ದಾರೆ. ‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...