alex Certify ಚಾರ್ಮಿನಾರ್‌ ಬಳಿ 500 ರ ನೋಟುಗಳ ಮಳೆ ಸುರಿಸಿದ ಭೂಪ, ದೃಶ್ಯ ನೋಡಿ ಬೆರಗಾದ ನೆಟ್ಟಿಗರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾರ್ಮಿನಾರ್‌ ಬಳಿ 500 ರ ನೋಟುಗಳ ಮಳೆ ಸುರಿಸಿದ ಭೂಪ, ದೃಶ್ಯ ನೋಡಿ ಬೆರಗಾದ ನೆಟ್ಟಿಗರು….!

ನಡುರಸ್ತೆಯಲ್ಲಿ ನಿಂತು ವ್ಯಕ್ತಿಯೊಬ್ಬ ನೋಟಿನ ಮಳೆ ಸುರಿಸಿದ್ರೆ ಹೇಗಿರತ್ತೆ ಹೇಳಿ? ಅಂಥದ್ದೇ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮದುವೆಗೆ ಬಂದಿದ್ದ ಅತಿಥಿಯೊಬ್ಬ ಈ ರೀತಿ 500ರ ನೋಟುಗಳನ್ನು ಹಾರಿಬಿಟ್ಟಿದ್ದಾನೆ. ತನಗಾದ ಸಂತೋಷವನ್ನು ವ್ಯಕ್ತಪಡಿಸಲು ಆತ ಈ ರೀತಿ ಮಾಡಿದ್ದಾನೆ ಅಂತ ಹೇಳಲಾಗ್ತಿದೆ.

ಗುಲ್ಜಾರ್ ಹೌಸ್ ಚಾರ್ಮಿನಾರ್‌ನಲ್ಲಿ ನಡೆದ ಮದುವೆ ಮೆರವಣಿಗೆಯಲ್ಲಿ 500 ರೂಪಾಯಿ ನೋಟುಗಳನ್ನು ಗಾಳಿಯಲ್ಲಿ ಹಾರಿಸಲಾಗಿದೆಯಂತೆ. ರಾತ್ರಿ ಈ ಘಟನೆ ನಡೆದಿದೆ. ಬಿಳಿಯ ಜುಬ್ಬಾ ಧರಿಸಿದ್ದ ವ್ಯಕ್ತಿ 500 ರೂಪಾಯಿಯ ನೂರಾರು ನೋಟುಗಳನ್ನು ಹಾರಿಸಿಬಿಟ್ಟಿದ್ದಾನೆ.  ಈ ವಿಡಿಯೋ ನೋಡಿದವರಿಗೆಲ್ಲ ಅಚ್ಚರಿಯೋ ಅಚ್ಚರಿ.

ಈ ರೀತಿ ನೋಟಿನ ಮಳೆ ಸುರಿಸಿದವನ ಬಳಿ ಅದೆಷ್ಟು ಹಣವಿರಬಹುದು ಅನ್ನೋ ಆಲೋಚನೆ ಒಂದು ಕಡೆಯಾದ್ರೆ, ಆ ಸ್ಥಳದಲ್ಲಿದ್ರೆ ನಮಗೂ ಗರಿ ಗರಿ ನೋಟು ಸಿಗುತ್ತಿತ್ತಲ್ಲ ಅಂತ ಹಲವರು ಪೇಚಾಡಿಕೊಂಡಿದ್ದಾರೆ. ಕೇವಲ 30 ಸೆಕೆಂಡುಗಳ ವಿಡಿಯೋ ಇದು. ಹಣವನ್ನು ಗಾಳಿಯಲ್ಲಿ ತೂರಿ ಆತ ಹೊರಟಿರುವುದು ಸೆರೆಯಾಗಿದೆ.

ಭಾರತದಲ್ಲಿ ಎರಡೊಪ್ಪತ್ತಿನ ಊಟ ಸಿಗದೇ ಪರದಾಡುವ ಲಕ್ಷಾಂತರ ಜನರಿದ್ದಾರೆ. ಅಂಥದ್ರಲ್ಲಿ ಮದುವೆ ಸಂಭ್ರಮಾಚರಣೆ ಹೆಸರಲ್ಲಿ ಈ ರೀತಿ ನೋಟು ಬಿಸಾಡುವವರೂ ಇರುವುದು ವಿಪರ್ಯಾಸವೇ ಸರಿ. ಅದೇ ಹಣವನ್ನು ಬಡವರ ಹೊಟ್ಟೆ ತುಂಬಿಸಲು ಬಳಸಿದ್ದರೆ ಸಾರ್ಥಕವಾಗುತ್ತಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...