alex Certify ಚಾರ್ಜರ್ ವಿಷಯಕ್ಕೆ ನಡೆದ ಜಗಳದಲ್ಲಿ ಮಹಿಳೆ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾರ್ಜರ್ ವಿಷಯಕ್ಕೆ ನಡೆದ ಜಗಳದಲ್ಲಿ ಮಹಿಳೆ ಬಲಿ

ಯುವಕನೊಬ್ಬ ಪಬ್ಜಿ ಗೇಮ್ ವ್ಯಸನಿಯಾಗಿದ್ದು, ಇದಕ್ಕಾಗಿ ಮೊಬೈಲ್ ನ್ನು ಚಾರ್ಜಿಗೆ ಹಾಕಿದ್ದ ವೇಳೆ ನಡೆದ ಜಗಳದಲ್ಲಿ ಆತನ ತಾಯಿ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಗಲಕಾನ್ ಎಸ್ಟೇಟ್ ನಲ್ಲಿ ನಡೆದಿದೆ.

ಶಾಹೀಲ್ ಎಂಬಾತ ಪಬ್ಜಿ ಗೇಮ್ ವ್ಯಸನಿಯಾಗಿದ್ದು, ಆಟವಾಡುವಾಗ ಚಾರ್ಜ್ ಖಾಲಿಯಾಗಿದೆ ಎಂಬ ಕಾರಣಕ್ಕೆ ಮೊಬೈಲನ್ನು ಚಾರ್ಜಿಗೆ ಹಾಕಿದ್ದಾನೆ. ಈ ಸಂದರ್ಭದಲ್ಲಿ ಹೊರಗೆ ಹೋಗಿದ್ದ ಆತನ ತಂದೆ ಮನೆಗೆ ಬಂದು ಮೊಬೈಲ್ ಚಾರ್ಜರ್ ತೆಗೆದಿದ್ದಾರೆ.

ಲಾಡ್ಜ್ ನಲ್ಲಿ ವೈದ್ಯನ ಹನಿಟ್ರ್ಯಾಪ್: ಸ್ನೇಹಿತ ಸೇರಿ ಮೂವರು ಸುಲಿಗೆಕೋರರು ಅರೆಸ್ಟ್

ಇದರಿಂದ ಕೋಪಗೊಂಡ ಶಾಹೀಲ್ ತಂದೆಯೊಂದಿಗೆ ಜಗಳವಾಡಿದ್ದು, ಕುಡಿದ ಅಮಲಿನಲ್ಲಿದ್ದ ಆತನ ತಂದೆ ಇಂತಿಯಾಜ್ ಮಗನನ್ನು ಬೆದರಿಸಲು ಬಂದೂಕು ತೆಗೆದುಕೊಂಡಿದ್ದಾನೆ.

ಈ ವೇಳೆ ಮಿಸ್ ಫೈರಾಗಿ ಗುಂಡು ಇಂತಿಯಾಜ್ ಪತ್ನಿ ಮೈಮುನ್ನೀಸಾಗೆ ತಾಗಿದೆ. ಇದರ ಪರಿಣಾಮ ಆಕೆ ಸಾವನ್ನಪ್ಪಿದ್ದು, ಇದೀಗ ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...