alex Certify ಚಳಿಗಾಲದ ತ್ವಚೆ ಸಮಸ್ಯೆಗೆ ಪರಿಹಾರ ಪುದೀನಾ ಫೇಸ್‌ ಪ್ಯಾಕ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದ ತ್ವಚೆ ಸಮಸ್ಯೆಗೆ ಪರಿಹಾರ ಪುದೀನಾ ಫೇಸ್‌ ಪ್ಯಾಕ್‌

ಪುದೀನಾ ಎಲೆಗಳು ಅಡುಗೆಗೆ ಮಾತ್ರವಲ್ಲ, ಫೇಸ್ ಪ್ಯಾಕ್ ಆಗಿಯೂ ಅತ್ಯುತ್ತಮವಾಗಿ ಬಳಕೆಯಾಗಬಲ್ಲವು ಎಂಬುದು ನಿಮಗೆ ಗೊತ್ತೇ?

ಚಳಿಗಾಲದಲ್ಲಿ ತ್ವಚೆ ಡ್ರೈ ಆಗಿ ಮುಖದಲ್ಲೆಲ್ಲಾ ತುರಿಕೆ ಕಾಣಿಸಿಕೊಳ್ಳುವುದು ಸಾಮಾನ್ಯ. ಇದರ ನಿವಾರಣೆಗೆ ಪುದೀನಾ ಫೇಸ್ ಮಾಸ್ಕ್ ಮಾಡಿಕೊಳ್ಳಬಹುದು.

ಹತ್ತು ಸ್ವಚ್ಛವಾದ ಪುದೀನಾ ಎಲೆಗಳನ್ನು ಕೊಯ್ದು ತೊಳೆದು ಒಂದು ಲೋಟ ನೀರು ಕುದಿಯಲು ಇಟ್ಟು, ಅದಕ್ಕೆ ಹಾಕಿ. ಹತ್ತು ನಿಮಿಷ ಕುದಿಸಿ ಬಳಿಕ ದಪ್ಪನೆಯ ಟವಲ್ ಅನ್ನು ಇದಕ್ಕೆ ಮುಳುಗಿಸಿ ಮುಖಕ್ಕೆ ಒತ್ತಿ. ಎರಡರಿಂದ ಮೂರು ನಿಮಿಷದ ಬಳಿಕ ಮತ್ತೆ ನೀರಿಗೆ ಅದ್ದಿ, ಇದನ್ನೇ ಪುನರಾವರ್ತಿಸಿ. ಐದರಿಂದ ಆರು ಬಾರಿ ಹೀಗೆ ಮಾಡುವುದರಿಂದ ತ್ವಚೆ ಮೃದುವಾಗುತ್ತದೆ. ದಿನಕ್ಕೆ ಎರಡು ಬಾರಿ ಹೀಗೆ ಮುಖಕ್ಕೆ ಪುದೀನಾ ನೀರನ್ನು ಲೇಪಿಸಿಕೊಳ್ಳಬಹುದು.

ಪುದೀನಾ ಎಲೆ, ಗುಲಾಬಿ ದಳ ಅಥವಾ ನೀರು, ಒಂದು ಚಮಚ ಜೇನುತುಪ್ಪ ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷ ಬಳಿಕ ಮುಖ ತೊಳೆಯಿರಿ. ವಾರಕ್ಕೆರಡು ಬಾರಿ ಇದನ್ನು ಮಾಡಿ ನೋಡಿ. ಒಣತ್ವಚೆ ಸಮಸ್ಯೆ ದೂರವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...