alex Certify ಚಳಿಗಾಲದಲ್ಲಿ ಕಾಡುವ ಶುಷ್ಕ ಚರ್ಮ ನಿವಾರಣೆಗೆ ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಕಾಡುವ ಶುಷ್ಕ ಚರ್ಮ ನಿವಾರಣೆಗೆ ಇಲ್ಲಿದೆ ಟಿಪ್ಸ್

ಚಳಿಗಾಲ ಬರ್ತಿದ್ದಂತೆ ಚರ್ಮ, ಕಾಂತಿ ಕಳೆದುಕೊಳ್ಳುತ್ತದೆ. ಚರ್ಮ ಶುಷ್ಕವಾಗಿ ಚರ್ಮದ ಹೊಳಪು ಕಡಿಮೆಯಾಗುತ್ತದೆ. ಚರ್ಮ ಒಣಗುವುದ್ರಿಂದ ನೋಡಲು ಆರ್ಕಷಕವಾಗಿ ಕಾಣುವುದಿಲ್ಲ. ಶುಷ್ಕ ಹವಾಮಾನದಿಂದಾಗಿ ಚಳಿಗಾಲದಲ್ಲಿ ಚರ್ಮಕ್ಕೆ ಹೆಚ್ಚಿನ ಆರೈಕೆ ಬೇಕಾಗುತ್ತದೆ.

ಹಿಂದೂಗಳ ವ್ಯಾಪಕ ವಿರೋಧದ ಬಳಿಕ ಕರವಾ ಚೌತ್​ ಜಾಹೀರಾತು ಹಿಂಪಡೆದ ಡಾಬರ್​ ಇಂಡಿಯಾ….!

ಚಳಿಗಾಲದಲ್ಲಿ ತಣ್ಣನೆಯ ನೀರಿನಿಂದ ಜನರು ದೂರ ಓಡ್ತಾರೆ. ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಲು ಬಯಸ್ತಾರೆ. ಆದ್ರೆ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಡಿ. ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಬಿಸಿ ನೀರು ಚರ್ಮದ ಎಣ್ಣೆ ಅಂಶವನ್ನು ತೆಗೆದು ಹಾಕುತ್ತದೆ. ಆಗ ಚರ್ಮ ಮತ್ತಷ್ಟು ಒಣಗಿದಂತೆ ಕಾಣುತ್ತದೆ.

ಒಣ ಚರ್ಮದವರು ಸಾಬೂನುಗಳನ್ನು ಬಳಸಬೇಡಿ. ಸೋಪ್ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಚರ್ಮ ಮತ್ತಷ್ಟು ಶುಷ್ಕವಾಗಲು ಕಾರಣವಾಗುತ್ತದೆ. ಮುಖವನ್ನು ಸ್ವಚ್ಛಗೊಳಿಸಲು ಹಾಲಿನ ಕೆನೆಯನ್ನು ಬಳಸಿ. ನಂತ್ರ ಆಲ್ಕೋಹಾಲ್ ಮುಕ್ತ ಟೋನರ್ ಅಥವ ಮಾಯಿಶ್ಚರೈಸರ್ ಬಳಸಿ.

ಉಬರ್ ಚಾಲಕನಿಗೆ ಲಾಟರಿಯಲ್ಲಿ ಬಂತು ಇಷ್ಟೊಂದು ಹಣ

ದೇಹಕ್ಕೆ ಉತ್ತಮ ಬಾಡಿ ಲೋಷನ್ ಅಥವಾ ಬಾಡಿ ಬಟರ್ ಬಳಸಿ. ಬಾಡಿ ಲೋಷನ್ ಖರೀದಿ ವೇಳೆ ಅದ್ರಲ್ಲಿ ನೈಸರ್ಗಿಕ ತೈಲಗಳಿವೆಯೇ ಎಂಬುದನ್ನು ಗಮನಿಸಿ.

ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ. ಹಾಗಂತ ನೀರು ಕುಡಿಯುವುದನ್ನು ನಿಲ್ಲಿಸಬೇಡಿ. ಕನಿಷ್ಠ ಎಂಟು ಗ್ಲಾಸ್ ನೀರನ್ನು ಸೇವಿಸಿ. ಜ್ಯೂಸ್ ಸೇವಿಸಿ. ನೀರಿನಂಶವಿರುವ ಹಣ್ಣುಗಳನ್ನು ಸೇವಿಸಿ. ತರಕಾರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ.

ವಾರಕ್ಕೆ ಎರಡು ಬಾರಿ ಫೇಸ್ ಸ್ಕ್ರಬ್ ಬಳಸಿ. ಚರ್ಮವು ಆರೋಗ್ಯಕರವಾಗಿರಲು ಇದು ಬಹಳ ಮುಖ್ಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...