alex Certify ಚಲಿಸುತ್ತಿದ್ದ ಎಲೆಕ್ಟ್ರಿಕ್‌ ಸ್ಕೂಟರ್‌ ನಲ್ಲಿ ಬೆಂಕಿ; ಪವಾಡಸದೃಶ ರೀತಿಯಲ್ಲಿ ಸವಾರ ಪಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿದ್ದ ಎಲೆಕ್ಟ್ರಿಕ್‌ ಸ್ಕೂಟರ್‌ ನಲ್ಲಿ ಬೆಂಕಿ; ಪವಾಡಸದೃಶ ರೀತಿಯಲ್ಲಿ ಸವಾರ ಪಾರು

ಬಿಗ್‌ ಬಾಸ್ಕೆಟ್‌ ಡೆಲಿವರಿ ಬಾಯ್‌ ಒಬ್ಬ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತ ಸವಾರಿ ಮಾಡ್ತಿದ್ದ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಚಲಿಸ್ತಾ ಇದ್ದ ಸ್ಕೂಟರ್‌ನಿಂದ ಜಂಪ್‌ ಮಾಡುವ ಮೂಲಕ ಆತ ಬಚಾವ್‌ ಆಗಿದ್ದಾನೆ.

ನೊಯ್ಡಾದಲ್ಲಿ ನಡೆದಿರೋ ಘಟನೆ ಇದು. ಎಲೆಕ್ಟ್ರಿಕ್‌ ಸ್ಕೂಟರ್‌  ನಡುರಸ್ತೆಯಲ್ಲೇ ಹೊತ್ತಿ ಉರಿದಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ವಿಡಿಯೋ ಕೂಡ ಆನ್‌ಲೈನ್‌ನಲ್ಲಿ ವೈರಲ್‌ ಆಗಿದೆ.

ಇತ್ತೀಚೆಗಷ್ಟೆ ಮಹಾರಾಷ್ಟ್ರದ ಪಾಲ್ಗಾರ್‌ನಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ ಒಂದರ ಬ್ಯಾಟರಿ ಸ್ಫೋಟಗೊಂಡು 7 ವರ್ಷದ ಬಾಲಕ ಮೃತಪಟ್ಟಿದ್ದ. ಘಟನೆ ನಡೆದಾಗ 2ನೇ ತರಗತಿಯಲ್ಲಿ ಓದ್ತಾ ಇದ್ದ ಶಬ್ಬೀರ್‌ ಅನ್ಸಾರಿ ತನ್ನ ತಾಯಿಯೊಂದಿಗೆ ನಿದ್ರಿಸುತ್ತಿದ್ದ. ಸೋಮವಾರವಷ್ಟೆ ಆಂಧ್ರದಲ್ಲಿ ಸುಮಾರು 36 ಎಲೆಕ್ಟ್ರಿಕ್‌ ಬೈಕ್‌ಗಳು ಬೆಂಕಿಗೆ ಆಹುತಿಯಾಗಿದ್ದವು.

ದೀಪಾವಳಿ ಪ್ರಯುಕ್ತ ವಿಶೇಷ ಆಫರ್‌ನಲ್ಲಿ ಮಾರಾಟಕ್ಕಿಟ್ಟಿದ್ದ ಬೈಕ್‌ಗಳೆಲ್ಲ ಸುಟ್ಟು ಕರಕಲಾಗಿದ್ದವು. ಕಳೆದ ತಿಂಗಳು ಹೈದರಾಬಾದ್‌ನ ಎಲೆಕ್ಟ್ರಿಕ್‌ ಬೈಕ್‌ ಶೋರೂಮ್‌ನಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 8 ಮಂದಿ ಸಾವನ್ನಪ್ಪಿದ್ದರು. ಈ ರೀತಿ ಒಂದಾದ ಮೇಲೊಂದರಂತೆ ಎಲೆಕ್ಟ್ರಿಕ್‌ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದು ವಾಹನ ಸವಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...