alex Certify ಚರ್ಮದ ತೇವಾಂಶ ಕಾಪಾಡಿಕೊಳ್ಳಲು ತಪ್ಪದೆ ಈ ಆಹಾರಗಳನ್ನು ಸೇವಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಮದ ತೇವಾಂಶ ಕಾಪಾಡಿಕೊಳ್ಳಲು ತಪ್ಪದೆ ಈ ಆಹಾರಗಳನ್ನು ಸೇವಿಸಿ

ಚರ್ಮದಲ್ಲಿ ತೇವಾಂಶ ಕಡಿಮೆಯಾದಾಗ ಬಿರುಕು ಬಿಡುತ್ತದೆ. ಹೆಚ್ಚಾಗಿ ಚಳಿಗಾಲದಲ್ಲಿ ಈ ಸಮಸ್ಯೆ ಕಾಡುತ್ತದೆ. ಆಗ ನಾವು ಮೊಯಿಶ್ಚರೈಸರ್ ಕ್ರಿಂಗಳನ್ನು ಹಚ್ಚುತ್ತೇವೆ. ಅದರ ಜೊತೆಗೆ ಈ ಆಹಾರಗಳನ್ನು ಸೇವಿಸುವುದರಿಂದಲೂ ನಾವು ಚರ್ಮದ ತೇವಾಂಶವನ್ನು ಲಾಕ್ ಮಾಡಬಹುದು. ಹಾಗಾದ್ರೆ ಆ ಆಹಾರಗಳು ಯಾವುದೆಂದು ತಿಳಿಯೋಣ.

ತೆಂಗಿನ ಕಾಯಿ: ತೆಂಗಿನಕಾಯಿ ಒಣ ಚರ್ಮದ ಸಮಸ್ಯೆಗೆ ಉತ್ತಮ ಮನೆಮದ್ದು. ಕೊಬ್ಬರಿಯನ್ನು ಸೇವಿಸುವುದರಿಂದ ಅದರಲ್ಲಿರುವ ಪೋಷಕಾಂಶಗಳು ನಿಮ್ಮ ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.

ಅವಕಾಡೊ : ಇದರಲ್ಲಿರುವ ಆರೋಗ್ಯಕರ ಕೊಬ್ಬುಗಳು, ಪ್ರೋಟಿನ್ ಗಳು ಮತ್ತು ಜೀವಸತ್ವಗಳು ನಿಮ್ಮ ಚರ್ಮವನ್ನು ಒಳಗಿನಿಂದ ಪೋಷಿಸುತ್ತದೆ.

ಸಿಹಿ ಗೆಣಸು : ಇದರಲ್ಲಿ ವಿಟಮಿನ್ ಎ ಹೇರಳವಾಗಿದ್ದು, ಇದು ಚರ್ಮದ ತೇವಾಂಶವನ್ನು ಒಳಗಿನಿಂದ ಲಾಕ್ ಮಾಡಿ ಹೊಳೆಯುವಂತೆ ಮಾಡುತ್ತದೆ.

ಆಲಿವ್ ಆಯಿಲ್ : ಈ ಎಣ್ಣೆಯನ್ನು ಅಡುಗೆಗೆ ಬಳಸುವುದರಿಂದ ನಿಮ್ಮ ಚರ್ಮ ತೇವಾಂಶದಿಂದ ಕೂಡಿರುತ್ತದೆ.

ಕ್ಯಾರೆಟ್ : ಇದರಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಇದು ಚರ್ಮವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...