alex Certify ಚಮಚದಲ್ಲಿ ಊಟ ಮಾಡುವವರಿಗೆ ಕೆಟ್ಟ ಸುದ್ದಿ……! ಅದರಿಂದಾಗುವ ನಷ್ಟವೇನು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಮಚದಲ್ಲಿ ಊಟ ಮಾಡುವವರಿಗೆ ಕೆಟ್ಟ ಸುದ್ದಿ……! ಅದರಿಂದಾಗುವ ನಷ್ಟವೇನು ಗೊತ್ತಾ…..?

ಬದಲಾಗುತ್ತಿರುವ ಸಂಸ್ಕೃತಿಯೊಂದಿಗೆ ನಮ್ಮ ಜೀವನಶೈಲಿ ಕೂಡ ವೇಗವಾಗಿ ಬದಲಾಗುತ್ತಿದೆ. ಇದಕ್ಕೆ ಒಂದು ಸಣ್ಣ ಉದಾಹರಣೆ ಅಂದರೆ, ಹಿಂದಿನ ಕಾಲದಲ್ಲಿ ಜನರು ಆಹಾರವನ್ನು ಕೈಯಿಂದ ತಿನ್ನುತ್ತಿದ್ದರು. ಆದರೆ ಈಗ ಚಮಚ, ಫೋರ್ಕ್‌, ಚಾಪ್‌ ಸ್ಟಿಕ್‌ಗಳು ಬಂದಿವೆ. ಚಮಚದಲ್ಲಿ ಆಹಾರ ಸೇವನೆ ಮಾಡುವುದು ಎಷ್ಟು ಸೂಕ್ತ? ಕೈಗಳಿಂದ ಊಟ ಮಾಡಿದರೆ ಅದೆಷ್ಟು ಪ್ರಯೋಜನಕಾರಿ ಅನ್ನೋದನ್ನು ನೋಡೋಣ.

ಭಾರತವಲ್ಲದೆ ನೇಪಾಳ, ಶ್ರೀಲಂಕಾ, ಪಾಕಿಸ್ತಾನ, ಮಲೇಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ಜನರು ತಮ್ಮ ಕೈಗಳಿಂದಲೇ ಊಟ ಮಾಡುತ್ತಾರೆ. ಉಪಹಾರ ಸೇವಿಸುತ್ತಾರೆ. ಕೈಯಿಂದ ತಿಂದರೆ ಊಟದ ರುಚಿ ಹೆಚ್ಚು ಅನ್ನೋದು ಹಲವರ ವಾದ. ಯಾರು ಚಮಚದಲ್ಲಿ ಆಹಾರ ಸೇವಿಸಲು ಇಷ್ಟಪಡುತ್ತಾರೋ ಅಂತಹವರ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಹದಗೆಡುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದಲ್ಲದೆ, ಅವರಲ್ಲಿ ಟೈಪ್ 2 ಮಧುಮೇಹದ ಅಪಾಯವೂ ಹೆಚ್ಚಾಗಿರುತ್ತದೆ.

ಯಾವ ವಿಧಾನವು ಹೆಚ್ಚು ಪ್ರಯೋಜನಕಾರಿ?

ಆಯುರ್ವೇದ ಮತ್ತು ಹಳೆಯ ಭಾರತೀಯ ಸಂಪ್ರದಾಯಗಳಲ್ಲಿ ಕೈಯಿಂದ ಆಹಾರವನ್ನು ತಿನ್ನುವ ಉಲ್ಲೇಖವಿದೆ. 5 ಬೆರಳುಗಳು ಐದು ಅಂಶಗಳನ್ನು ಪ್ರತಿನಿಧಿಸುತ್ತವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಹೆಬ್ಬೆರಳು ಬೆಂಕಿ, ತೋರುಬೆರಳು ಗಾಳಿ, ಮಧ್ಯದ ಬೆರಳು ಆಕಾಶ, ಉಂಗುರ ಬೆರಳು ಭೂಮಿ ಮತ್ತು ಕಿರುಬೆರಳು ನೀರು. ನಾವು ಕೈಯಿಂದ ಆಹಾರವನ್ನು ಸೇವಿಸಿದಾಗ ಅತಿಯಾಗಿ ತಿನ್ನುವುದಿಲ್ಲ, ಊಟದ ಪ್ರಮಾಣ ಕಡಿಮೆ ಇರುತ್ತದೆ. ಹೀಗೆ ಮಾಡುವುದರಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು.

ಕೈಯಿಂದ ಆಹಾರ ತಿನ್ನುವುದು ಕೂಡ ಒಂದು ಕಲೆ. ಕೈಯಿಂದ ಊಟ ಮಾಡುವಾಗ ಬೆರಳುಗಳನ್ನು ಬಾಯಿಯಲ್ಲಿ ಇಡಬೇಕಾಗಿಲ್ಲ. ಬದಲಿಗೆ ಆಹಾರವನ್ನು ಬಾಯಿಗೆ ತಳ್ಳಬೇಕು. ಆಹಾರವನ್ನು ತಿನ್ನುವ ಮೊದಲು ಕೈಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ. ಕೈಯಿಂದ ಆಹಾರವನ್ನು ಸೇವಿಸಿದಾಗ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ನಾವು ಸಂಪರ್ಕ ಹೊಂದುತ್ತೇವೆ ಎಂದು ತಜ್ಞರು ಹೇಳುತ್ತಾರೆ.

ಇದಲ್ಲದೆ ಕೈಗಳಿಂದ ಊಟ ಮಾಡುವಾಗ ಸ್ನಾಯುಗಳಿಗೆ ವ್ಯಾಯಾಮವಾಗುತ್ತದೆ. ಕೈಯಿಂದ ಆಹಾರವನ್ನು ಸೇವಿಸುವುದರಿಂದ ರಕ್ತ ಪರಿಚಲನೆ ಸರಿಯಾಗಿರುತ್ತದೆ. ಹಾಗಾಗಿ ಚಮಚವನ್ನು ಬಳಕೆ ಮಾಡುವ ಬದಲು ಕೈಗಳಿಂದ್ಲೇ ಊಟ ಮಾಡುವುದು ಉತ್ತಮ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...