alex Certify ಗ್ರಾಹಕರ ಸಭ್ಯತೆ ಆಧಾರದ ಮೇಲೆ ಆಹಾರದ ಬಿಲ್​ ನಿಗದಿ ಮಾಡುತ್ತೆ ಈ ಹೋಟೆಲ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರ ಸಭ್ಯತೆ ಆಧಾರದ ಮೇಲೆ ಆಹಾರದ ಬಿಲ್​ ನಿಗದಿ ಮಾಡುತ್ತೆ ಈ ಹೋಟೆಲ್​….!

ಲಂಡನ್​: ಹೋಟೆಲ್​ಗೆ ಹೋದ ಸಂದರ್ಭದಲ್ಲಿ ನೀವು ಎಷ್ಟು ಸಭ್ಯರಾಗಿ ವರ್ತಿಸುತ್ತೀರೋ ಅಷ್ಟು ಕಡಿಮೆ ಮೊತ್ತದಲ್ಲಿ ಆಹಾರ ಸೇವನೆ ಮಾಡಬಹುದು !

ಇಂಥದ್ದೊಂದು ಕುತೂಹಲದ ನಿಯಮ ಜಾರಿಗೆ ತಂದಿರುವುದು ಇಂಗ್ಲೆಂಡ್​ನ ಪ್ರೆಸ್ಟನ್‌ನಲ್ಲಿರುವ ಚಾಯ್ ಸ್ಟಾಪ್ ಎಂಬ ಹೋಟೆಲ್​. ಇಲ್ಲಿಗೆ ಬರುವ ಗ್ರಾಹಕರು, ಊಟ ಸರಬರಾಜು ಮಾಡುವ ಸಿಬ್ಬಂದಿ ಮೇಲೆ ರೇಗಾಟ, ಕೂಗಾಟ, ಅನುಚಿತ ವರ್ತನೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಹೋಟೆಲ್​ಗೆ ಹೋದಾಗ ಸಭ್ಯರಾಗಿದ್ದರೆ ಮಾತ್ರ ಕಡಿಮೆ ಮೊತ್ತದಲ್ಲಿ ಆಹಾರ ಸೇವನೆ ಮಾಡಬಹುದು, ಎಷ್ಟು ಅಸಭ್ಯವಾಗಿ ವರ್ತಿಸುತ್ತೀರೋ ಅಷ್ಟು ದುಬಾರಿ ಬೆಲೆಯನ್ನು ತೆರಬೇಕು !

ಹೋಟೆಲ್​ಗೆ ಬರುವ ಗ್ರಾಹಕರು ಸಭ್ಯರಾಗಿ ವರ್ತಿಸುವುದನ್ನು ಉತ್ತೇಜಿಸಲು ಇಂಥ ನಿಯಮ ಜಾರಿಗೆ ತರಲಾಗಿದೆ ಎಂದಿದ್ದಾರೆ ಇದರ ಮಾಲೀಕ ಉಸ್ಮಾನ್ ಹುಸೇನ್. ಚಹ, ಡೋನಟ್, ಸ್ಟ್ರೀಟ್ ಫುಡ್ ಮತ್ತು ಡೆಸರ್ಟ್​ಗಳು ಇಲ್ಲಿ ಲಭ್ಯವಿದ್ದು, ಬರುವ ಗ್ರಾಹಕರ ಸಭ್ಯತೆಯ ಆಧಾರದ ಮೇಲೆ ಬೇರೆ ಬೇರೆ ರೀತಿಯ ಶುಲ್ಕ ವಿಧಿಸಲಾಗುತ್ತದೆ.

ಈ ಕುರಿತು ದೊಡ್ಡದೊಂದು ಫಲಕ ಕೂಡ ಅಳವಡಿಸಲಾಗಿದೆ. ಅದರಲ್ಲಿ ಗ್ರಾಹಕರು ಹೇಗೆ ಸಭ್ಯರಾಗಿ ನಡೆದುಕೊಳ್ಳಬೇಕು ಎಂಬ ಬಗ್ಗೆ ಚಿಕ್ಕ-ಚೊಕ್ಕದಾಗಿ ಉಲ್ಲೇಖಿಸಲಾಗಿದೆ. “ದೇಸಿ ಚಾಯ್ ಕೊಡಿ” ಎಂದರೆ ಆ ಚಹಕ್ಕೆ ಗ್ರಾಹಕರಿಗೆ 5 ಡಾಲರ್​ ಶುಲ್ಕವಾದರೆ, “ದಯವಿಟ್ಟು ದೇಸಿ ಚಾಯ್​ ಕೊಡುವಿರಾ” ಎಂದು ಕೇಳಿದರೆ ಅದೇ ಚಹದ ಬೆಲೆ 3 ಡಾಲರ್​. ಒಂದು ವೇಳೆ “ಹಲೋ ದೇಸಿ ಚಾಯ್​ ಕೊಡಿ” ಎಂದು ಆರ್ಡರ್​ ಮಾಡಿದರೆ ಅದೇ ಚಹಕ್ಕೆ 1.90 ಡಾಲರ್​ ದರ ವಿಧಿಸಲಾಗುವುದು ಎಂದು ಗ್ರಾಹಕರಿಗೆ ಸೂಚ್ಯವಾಗಿ ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...