alex Certify ಗ್ರಾಹಕನ ಸೋಗಿನಲ್ಲಿ ಬಂದವನಿಂದ ದುಬಾರಿ ಬೆಲೆಯ ‘ಐಫೋನ್’ ಕಳ್ಳತನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕನ ಸೋಗಿನಲ್ಲಿ ಬಂದವನಿಂದ ದುಬಾರಿ ಬೆಲೆಯ ‘ಐಫೋನ್’ ಕಳ್ಳತನ

ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ದುಬಾರಿ ಬೆಲೆಯ 2 ಐಫೋನ್ ಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿರುವ ರಿಲಯನ್ಸ್ ಡಿಜಿಟಲ್ ಶೋರೂಮ್ ಗೆ ಮಂಗಳವಾರ ಸಂಜೆ ಬಂದ ವ್ಯಕ್ತಿಯೊಬ್ಬ ಖರೀದಿಸುವ ನೆಪದಲ್ಲಿ ಅಂಗಡಿಯನ್ನೆಲ್ಲ ಸುತ್ತಾಡಿದ್ದಾನೆ. ಜೊತೆಗೆ ಮೊಬೈಲ್ ಫೋನ್ ಗಳನ್ನು ಪರಿಶೀಲಿಸಿದ್ದಾನೆ.

ಬಳಿಕ ಆಪಲ್ – 12 ಮಾಡೆಲ್ ನ ಎರಡು ಮೊಬೈಲ್ ಗಳನ್ನು ತನ್ನ ಜೇಬಿಗಿಳಿಸಿ ಪರಾರಿಯಾಗಿದ್ದು, ಶೋರೂಮ್ ನವರು ಮಾರನೇ ದಿನ ಸ್ಟಾಕ್ ಪರಿಶೀಲಿಸಿದಾಗ ಇದು ಬೆಳಕಿಗೆ ಬಂದಿದೆ. ಸಿಸಿ ಟಿವಿಯಲ್ಲಿ ಕಳ್ಳನ ಕೃತ್ಯ ಸೆರೆಯಾಗಿದ್ದು ಇದೀಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...