alex Certify ಗ್ರಾಪಂ ವ್ಯಾಪ್ತಿಯಲ್ಲಿ ಇ- ಬೆಳಕು ಯೋಜನೆ ಮೂಲಕ ಅನಗತ್ಯ ಸಂಪರ್ಕ ಕಿತ್ತು ಹಾಕಲು ಮುಂದಾದ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಪಂ ವ್ಯಾಪ್ತಿಯಲ್ಲಿ ಇ- ಬೆಳಕು ಯೋಜನೆ ಮೂಲಕ ಅನಗತ್ಯ ಸಂಪರ್ಕ ಕಿತ್ತು ಹಾಕಲು ಮುಂದಾದ ಸರ್ಕಾರ

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಬಳಕೆಯಲ್ಲಿ ಇಲ್ಲದಿದ್ದರೂ ವಿದ್ಯುತ್ ಬಿಲ್ ಮಾತ್ರ ಬರುತ್ತಲೇ ಇದ್ದು, ಅಂತಹ ಲೋಪ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇ- ಬೆಳಕು ಯೋಜನೆ ರೂಪಿಸಲು ಮುಂದಾಗಿದೆ.

ಆನ್ ಲೈನ್ ಮೂಲಕ ಸಂಪರ್ಕ ದೃಢೀಕರಿಸುವ ವ್ಯವಸ್ಥೆಗೆ ಇಲಾಖೆ ಮುಂದಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಸಂಪರ್ಕ ಇಲ್ಲದಿದ್ದರೂ ಬಿಲ್ ಪಾವತಿಯಾಗುವ ಕಾರ್ಯ ನಡೆಯುತ್ತಿದೆ. ಇದರಿಂದಾಗಿ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುತ್ತಿದೆ. ಇದನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಇಲಾಖೆ ಈ ಯೋಜನೆ ರೂಪಿಸಲು ಮುಂದಾಗಿದೆ.

ರಾಜ್ಯದಲ್ಲಿ ಸದ್ಯದ ಮಾಹಿತಿಯಂತೆ ಬರೋಬ್ಬರಿ 50 ಲಕ್ಷ ಬಳಕೆಯಾಗದ ಸಂಪರ್ಕಗಳಿಗೆ ಗ್ರಾಪಂ ವತಿಯಿಂದ ಬಿಲ್ ಪಾವತಿ ಮಾಡಲಾಗುತ್ತಿದೆ. ಇದರಿಂದಾಗಿ ವಾರ್ಷಿಕ 1 ಸಾವಿರ ಕೋಟಿ ರೂ. ಸರ್ಕಾರಕ್ಕೆ ನಷ್ಟವಾಗುತ್ತಿದೆ. ಈ ಹಿಂದೆ ಸರ್ಕಾರವು 2015ರಲ್ಲಿ 1 ಸಾವಿರ ಕೋಟಿ ಬಿಲ್ ಮೊತ್ತ ಮನ್ನಾ ಮಾಡಿತ್ತು. ಸದ್ಯ ಗ್ರಾಪಂ ಸ್ವತ್ತುಗಳಿಂದ ಸರ್ಕಾರಕ್ಕೆ 4 ಸಾವಿರ ಕೋಟಿ ರೂ. ಸಂದಾಯವಾಗಬೇಕಾಗಿದೆ.

ಹೀಗಾಗಿ ಅನಗತ್ಯ ಸಂಪರ್ಕಗಳನ್ನು ತೆಗೆದು ಇ- ಬೆಳಕು ಪೋರ್ಟಲ್ ಮೂಲಕ ವಿದ್ಯುತ್ ಪೂರೈಕೆ ಮಾಡಲು ಇಲಾಖೆ ನಿರ್ಧರಿಸಿದೆ. ರಾಜ್ಯದಲ್ಲಿನ 5962 ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಘಟಕ, ಕೊಳವೆ ಬಾವಿ, ಬೀದಿ ದೀಪ ಸೇರಿದಂತೆ 1.50 ಲಕ್ಷ ವಿದ್ಯುತ್ ಸಂಪರ್ಕಗಳು ಇದ್ದವು. ಆದರೆ ಈ ಪೈಕಿ 50 ಲಕ್ಷ ಸಂಪರ್ಕಗಳು ಬಳಕೆಯಲ್ಲಿಯೇ ಇಲ್ಲ. ಹೀಗಾಗಿ ಬಿಲ್ ಮಾತ್ರ ಬರುತ್ತಲೇ ಇದೆ. ಇದರಿಂದಾಗಿ ಸರ್ಕಾರಕ್ಕೆ ಸಾಕಷ್ಟು ನಷ್ಟವಾಗುತ್ತಿದ್ದು, ಈ ಯೋಜನೆ ಜಾರಿಗೊಳಿಸಲು ಇಲಾಖೆ ಮುಂದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...