alex Certify ಗೆಳೆಯರೊಂದಿಗೆ ಶಿಕಾರಿಗೆ ಹೋದ ಯುವಕ ಗುಂಡೇಟಿಗೆ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳೆಯರೊಂದಿಗೆ ಶಿಕಾರಿಗೆ ಹೋದ ಯುವಕ ಗುಂಡೇಟಿಗೆ ಬಲಿ

ಹಾಸನ: ಸ್ನೇಹಿತರೊಂದಿಗೆ ಶಿಕಾರಿಗೆಂದು ಹೋಗಿದ್ದ ಯುವಕನೊಬ್ಬ ಗುಂಡೇಟಿಗೆ ಬಲಿಯಾಗಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ನಡೆದಿದೆ.

ಕುಶಾವರ ಗ್ರಾಮದ ಮಧು (24) ಮೃತ ಯುವಕ. ಗೆಳೆಯರೊಂದಿಗೆ ಬೇಟೆಗೆ ಹೋಗಿ ಬರುವುದಾಗಿ ಹೇಳಿ ಕಲ್ಲಹಳ್ಳಿ ಕಾಡಿಗೆ ಸ್ನೇಹಿತರೆಲ್ಲ ತೆರಳಿದ್ದಾರೆ. ಈ ವೇಳೆ ಯುವಕನಿಗೆ ಗುಂಡೇಟು ತಗುಲಿ ತೀವ್ರವಾಗಿ ಗಾಯಗೊಂಡಿದ್ದಾನೆ. ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕೆ ಬೋಟ್ ಮುಳುಗಡೆ: ಮೀನುಗಾರ ನಾಪತ್ತೆ, ಮೂವರ ರಕ್ಷಣೆ

ಯುವಕನ ಜೊತೆ ಶಿಕಾರಿಗೆ ಹೋಗಿದ್ದ ಸ್ನೇಹಿತರು ಘಟನೆ ಬಳಿಕ ಪರಾರಿಯಾಗಿದ್ದು, ಯುವಕನ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಳೆಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...