alex Certify ಗೃಹಬಳಕೆ ವಸ್ತುಗಳ ಮಾರಾಟಕ್ಕಿಳಿದ ಪ್ರಿಯಾಂಕಾ ಚೋಪ್ರಾ, ಬೆಲೆ ಕೇಳಿ ಶಾಕ್‌ ಆಗಿದ್ದಾರೆ ಅಭಿಮಾನಿಗಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೃಹಬಳಕೆ ವಸ್ತುಗಳ ಮಾರಾಟಕ್ಕಿಳಿದ ಪ್ರಿಯಾಂಕಾ ಚೋಪ್ರಾ, ಬೆಲೆ ಕೇಳಿ ಶಾಕ್‌ ಆಗಿದ್ದಾರೆ ಅಭಿಮಾನಿಗಳು….!

ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ ಮಾತ್ರವಲ್ಲ ಹಾಲಿವುಡ್‌ನಲ್ಲೂ ಹೆಸರು ಮಾಡಿದ್ದಾರೆ. ಕೇವಲ ನಟನೆಗೆ ಮಾತ್ರ ಸೀಮಿತವಾಗಿ ಉಳಿಯದೇ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. ಈಗಾಗ್ಲೇ ಪ್ರಿಯಾಂಕಾ ಚೋಪ್ರಾ ಕೆಲವು ರೆಸ್ಟೋರೆಂಟ್‌ಗಳನ್ನು ಆರಂಭಿಸಿದ್ದಾರೆ. ಅದಕ್ಕೆ ಸೋನಾ ಎಂದು ಹೆಸರಿಟ್ಟಿದ್ದಾರೆ.

ಇದರ ಬೆನ್ನಲ್ಲೇ ಮತ್ತೊಂದು ಬ್ಯುಸಿನೆಸ್‌ಗೆ ಪಿಗ್ಗಿ ಕೈಹಾಕಿದ್ದು, ಸಾಕಷ್ಟು ಟ್ರೋಲ್‌ ಕೂಡ ಆಗ್ತಿದ್ದಾರೆ. ಗೃಹಬಳಕೆ ವಸ್ತುಗಳ ತಮ್ಮದೇ ಬ್ರಾಂಡ್‌ ಒಂದನ್ನು ಪ್ರಿಯಾಂಕಾ ಆರಂಭಿಸಿದ್ದಾರೆ. ಅದಕ್ಕೆ ಸೋನಾ ಹೋಮ್‌ ಎಂದು ಹೆಸರಿಟ್ಟಿದ್ದಾರೆ.

ಭಾರತದ ವಸ್ತುವನ್ನು ಅಮೆರಿಕಕ್ಕೆ ತರಲು ತಮ್ಮ ಬ್ರ್ಯಾಂಡ್‌ ಸಹಾಯ ಮಾಡುತ್ತದೆ ಅನ್ನೋದು ಪ್ರಿಯಾಂಕಾ ಕೊಟ್ಟಿರೋ ಭರವಸೆ. ಅದೇನೇ ಆದ್ರೂ ಸೋನಾ ಹೋಮ್‌ ಉತ್ಪನ್ನಗಳ ಬೆಲೆ ಕೇಳಿದ್ರೆ ಜನಸಾಮಾನ್ಯರು ದಿಗ್ಭ್ರಮೆಗೆ ಒಳಗಾಗ್ತಾರೆ.

ಸೋನಾ ಹೋಮ್‌ ಬ್ರಾಂಡ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಒಂದು ಟೇಬಲ್‌ ಕ್ಲಾಥ್‌ ಬೆಲೆ 30,612 ರೂಪಾಯಿ. ನಾಲ್ಕು ಡಿನ್ನರ್ ನ್ಯಾಪ್ಕಿನ್‌ಗಳ ಬೆಲೆ 13,284 ರೂಪಾಯಿ. ಊಟದ ತಟ್ಟೆಗೆ 4,733 ರೂಪಾಯಿ ಆದ್ರೆ , ಸರ್ವಿಂಗ್ ಬೌಲ್‌ಗೆ 7,732 ರೂಪಾಯಿ ಇದೆ. ಟೀ ಕಪ್ ಮತ್ತು ಸಾಸರ್‌ಗೆ 5,365 ರೂಪಾಯಿ ಮತ್ತು ಮಗ್‌ನ ಬೆಲೆ 3,471 ರೂಪಾಯಿ. ಪ್ರಿಯಾಂಕಾ ತಮ್ಮ ಬ್ರ್ಯಾಂಡ್‌ನ ಉತ್ಪನ್ನಗಳಿಗೆ ಈ ಪರಿ ದರ ವಿಧಿಸಿರೋದು ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದೆ.

ಬೆಲೆಗಳು ಕೊಂಚವಾದ್ರೂ ವಾಸ್ತವಕ್ಕೆ ಹತ್ತಿರವಿರಲಿ ಅನ್ನೋದು ಜನರ ಅಭಿಪ್ರಾಯ. ಇದೇ ಕಾರಣಕ್ಕೆ ಪ್ರಿಯಾಂಕಾ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆಗ್ತಿದ್ದಾರೆ. ಬ್ಯುಸಿನೆಸ್‌ ಮಾತ್ರವಲ್ಲ ನಟನೆಯಲ್ಲೂ ಪ್ರಿಯಾಂಕಾ ಬ್ಯುಸಿಯಾಗಿಯೇ ಇದ್ದಾರೆ. ಪಿಗ್ಗಿ ಅಭಿನಯದ ಮೊದಲ ವೆಬ್ ಸರಣಿ ‘ಸಿಟಾಡೆಲ್’ ಚಿತ್ರೀಕರಣ ಮುಗಿದಿದೆ. ‘ಇಟ್ಸ್ ಕಮಿಂಗ್ ಬ್ಯಾಕ್ ಟು ಮಿ’ ಚಿತ್ರದಲ್ಲೂ ಈಕೆ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನ ಜೀ ಲೇ ಜರಾ ಚಿತ್ರ ಕೂಡ ಬಿಡುಗಡೆಯ ಹೊಸ್ತಿಲಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...