alex Certify ಗೂಗಲ್​​ನಲ್ಲಿ ಈ ವಿಚಾರಗಳನ್ನು ತಪ್ಪಿಯೂ ಹುಡುಕಬೇಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೂಗಲ್​​ನಲ್ಲಿ ಈ ವಿಚಾರಗಳನ್ನು ತಪ್ಪಿಯೂ ಹುಡುಕಬೇಡಿ..!

ಗೂಗಲ್​ ಒಂದು ಜನಪ್ರಿಯ ಸರ್ಚ್​ ಇಂಜಿನ್​ ಆಗಿದೆ. ಬಹುತೇಕ ಎಲ್ಲಾ ಇಂಟರ್ನೆಟ್​ ಬಳಕೆದಾರರು ಗೂಗಲ್​ನ್ನು ಬಳಕೆ ಮಾಡುತ್ತಾರೆ. ಯಾವುದೇ ವಿಚಾರವನ್ನು ತಿಳಿದುಕೊಳ್ಳಬೇಕು ಅಂದರೆ ಜನರು ಗೂಗಲ್ ಮಾಡಿ ನೋಡುತ್ತಾರೆ.

ಗೂಗಲ್​ ಕೂಡ ಜನರ ಪ್ರಶ್ನೆಗಳಿಗೆ ಕೆಲವೇ ಸೆಕೆಂಡ್​ಗಳಲ್ಲಿ ಉತ್ತರ ನೀಡುತ್ತದೆ. ಆದರೆ ಈ ಗೂಗಲ್​​ನಲ್ಲಿ ನೀವು ಯಾವುದೇ ವಿಚಾರಗಳನ್ನು ಹುಡುಕುವ ಮುನ್ನ ಎಚ್ಚರವಾಗಿ ಇರಬೇಕು. ಏಕೆಂದರೆ ಕೆಲವು ವಿಚಾರಗಳು ನಿಮ್ಮನ್ನು ಜೈಲಿಗೆ ತಳ್ಳುವ ಸಾಧ್ಯತೆ ಕೂಡ ಇದೆ.

ಹಾಗಾದರೆ ಯಾವೆಲ್ಲ ವಿಚಾರಗಳನ್ನು ನೀವು ಗೂಗಲ್​ನಲ್ಲಿ ಸರ್ಚ್​ ಮಾಡಿದರೆ ಕಾನೂನಿನ ಉಲ್ಲಂಘನೆಯಾಗುತ್ತದೆ ಅನ್ನೋದನ್ನು ತಿಳಿದುಕೊಳ್ಳೋಣ:

ಚಲನಚಿತ್ರ ಪೈರಸಿ:

ಬಿಡುಗಡೆಗೂ ಮುನ್ನ ಪೈರಸಿ ಕಾಟಕ್ಕೆ ಒಳಗಾಗುವ ಸಿನಿಮಾಗಳು ಅಪರಾಧದ ಅಡಿಯಲ್ಲಿ ಬರುತ್ತದೆ. ಹೀಗಾಗಿ ಪೈರೇಟೆಡ್​ ಸಿನಿಮಾಗಳನ್ನು ಡೌನ್​ಲೋಡ್​ ಮಾಡಿ ವೀಕ್ಷಿಸುವುದೂ ಸಹ ಅಪರಾಧ ಎಂದು ಪರಿಗಣಿಸಲಾಗಿದೆ.

ಈ ಕಾನೂನನ್ನು ಉಲ್ಲಂಘನೆ ಮಾಡಿದರೆ 3 ವರ್ಷಗಳ ಜೈಲು ಶಿಕ್ಷೆ ಅಥವಾ 10 ಲಕ್ಷ ರೂಪಾಯಿವರೆಗೆ ದಂಡ ವಿಧಿಕೆಯಾಗಲಿದೆ.

ಬಾಂಬ್​ ತಯಾರಿಸುವುದು ಹೇಗೆ..?

ತಮಾಷೆಗೆಂದು ನೀವು ಗೂಗಲ್​ನಲ್ಲಿ ಬಾಂಬ್​ ತಯಾರಿಸುವುದು ಹೇಗೆ ಎಂದು ಸರ್ಚ್​ ಮಾಡಿದರೂ ಸಹ ನಿಮಗೆ ಜೈಲೂಟ ಫಿಕ್ಸ್​ ಆಗಬಹುದು.

ಈ ವಿಚಾರಗಳನ್ನು ಸೈಬರ್​ ಸೆಲ್​ ಮೇಲ್ವಿಚಾರಣೆ ಮಾಡುತ್ತಿರುತ್ತದೆ. ನೀವು ಈ ರೀತಿಯಾಗಿ ಗೂಗಲ್​ ಸರ್ಚ್​ ಮಾಡಿದಲ್ಲಿ ತಕ್ಷಣವೇ ನಿಮ್ಮ ವಿವರಗಳನ್ನು ಭದ್ರತಾ ಏಜೆನ್ಸಿಗೆ ರವಾನೆ ಮಾಡಲಾಗುತ್ತದೆ.

ಗರ್ಭಪಾತ ಮಾಡುವುದು ಹೇಗೆ..?

ಹೌದು..! ಗರ್ಭಪಾತ ಮಾಡುವ ಮಾರ್ಗವನ್ನು ಹುಡುಕಲು ನೀವು ಗೂಗಲ್​ ಮೊರೆ ಹೋಗಿದ್ದರೆ ಖಂಡಿತವಾಗಿಯೂ ತೊಂದರೆಗೆ ಸಿಲುಕಲಿದ್ದೀರಿ. ಭಾರತೀಯ ಕಾನೂನಿನ ಪ್ರಕಾರ ವೈದ್ಯರನ್ನು ಸಂಪರ್ಕಿಸದೇ ಗರ್ಭಪಾತ ಮಾಡುವುದು ಕಾನೂನಿನ ಉಲ್ಲಂಘನೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...